ಸೂರ್ಯಚಂದ್ರ
ಮುಂಜಾವಿನ ಇಬ್ಬನಿಯ ತಂಪು
ಬೀರಿದೆ ಎಲ್ಲೆಡೆ ಅದರ ಕಂಪು
ಅದನೂಡಲು ಬಂದ ಹಕ್ಕಿಗಳು ಇಂಪಾದ
ಕಲರವ ಕಿವಿಗಳಿಗೆ ನೀಡಿದೆ ಇಂಪು
ಸೂರ್ಯನ ಅಪ್ಪುಗೆ ಕೈ ಚಾಚುವ ಸುಮಗಳು
ಹಸಿ ಬಿಸಿಲಿನ ಬೆಚ್ಚುಗೆ ಮೈ ಒಡ್ಡುವ ಶಿಶುಗಳು
ಹೊತ್ತು ಏರಿದಂತೆ ಸುಸ್ತಾಗುವ ಮನುಜರು
ನಮ್ಮೆಲ್ಲರ ಉರಿದುಂಬಿಸಿ ಪ್ರಚಲಿತವಾಗಿಸುವುದೆ ನಮ್ಮ ದಿನಕರನ ತಾಕತ್ತು
ರವಿಯ ಪ್ರಖರತೆಯಿಂದ ಪ್ರಜ್ವಲಿಸುವ ಶಶಿಯೇ
ನಿನ್ನ ಅಂದಕ್ಕೆ ಸಾಟಿ ಯಾರು
ಚಂದ್ರನ ಸೌಂದರ್ಯದ ಮುಂದೆ ಏನೂ ಇಲ್ಲ ಮಕ್ಕಳ ಮುದ್ದಿನ ಮಾವ..ಪ್ರೇಮಿಗಳ ಪ್ರೀತಿಯ ರಾಜ ಅವನೇ ಅರಸ ...
- RoopaGowtham
11 May 2020, 08:37 am
Download App from Playstore: