ಪ್ರೀತಿಯಲಿ ಏನಿದೆ..?!!

ನನ್ನವಳ ಪ್ರೀತಿಯಲಿ..
ಒಲವಿದೆ ಚೆಲುವಿದೆ
ನೋವು ನಲಿವಿನ ಸಮಬಾಳಿದೆ...
ಕನಸಿದೆ ಮನಸಿದೆ
ಆಗಾಗ ಹುಸಿ ಮುನಿಸಿದೆ...
ಮರೆಯದ ಮಧುರ ನೆನಪಿದೆ
ಕಣ್ಣಿಗೆ ಕಟ್ಟಿದ ಅವಳ ಒನಪಿದೆ...
ಬೆಡಗಿದೆ ಸಿಟ್ಟು ಸೆಡಗಿದೆ
ಕರುಣೆ ಅವಳೆದೆ ಗೂಡಲೇ ಅಡಗಿದೆ..
ಇದೆ ನನ್ನವಳ ಪ್ರೀತಿ ತುಂಬಾ ಇದೆ
ಎಲ್ಲದಕ್ಕೂ ಮೀರಿ...
ಅವಳ ಅಧರಗಳಲಿ ಸವಿ ಜೇನಿದೆ...!!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

12 May 2020, 08:55 am
Download App from Playstore: