ಮನ...

ಮನವೆಂಬ ಮರ್ಕಟದ ಎದುರು
ಮನಬಂದಂತೆ ನಟಿಸುವರು ಎಲ್ಲರು...

ಯಾರಿಗೂ ತಿಳಿಯದ ಮನದ ಮಾತನು ಕೇಳುವನು
ಇಂದಿಗೂ ಕಾಣಸಿಕ್ಕಿರದ ಆ ದೇವನು...

ಮನಕುಲ್ಲಾಸ ತರಲು ಸಾಧ್ಯವಿರುವುದು ಒಬ್ಬನಿಗೆ
ಅದುವೇ ನಿನ್ನೊಳಗಿರುವ ಅಪರಿಚಿತನಿಗೆ...

ಹೇಳತೀರದು ನನ್ನೆಲ್ಲಾ ಮನದ ಮಾತು
ಕೇಳಿದರೆ, ಕರಗಿ ನೀರಾಗುವಿರಿ ಸೋತು...

ಭ್ರಮೆಯೊಳಗಿನ ಬದುಕೇ ಸುಂದರ
ವಾಸ್ತವತೆಗೆ ನಿಲುಕದ ಅಂದರ....

ಮನವೆಂಬ ಮರ್ಕಟದ ಎದುರು
ಮನಬಂದಂತೆ ನಟಿಸುವರು ಎಲ್ಲರು... (2)

-ಸ್ವರಚಿತ

"ಮನವೇ ಮನುಷ್ಯನ ಬಂಧ - ಚೆಂದಗಳಿಗೆ ಕಾರಣ"

- RameshHG

16 May 2020, 01:06 pm
Download App from Playstore: