ಕಾಣೆಯಾಗಿರುವೆ..
ಕಾಣೆಯಾಗಿರುವೆ ನನ್ನಿ ಮನದಿ
ಸಂಚಾರಿ ಸೂಚನೆ ತಿಳಿಸದೆ!
ಸ್ವಾಗತ ಕೋರುವ ಗೋಜಿರಲಿಲ್ಲ
ಅಂದು ಪ್ರೀತಿಯಲ್ಲಿ ಎಡವಲು.
ಕಣ್ಣಿನ ಸಲಹೆಯಲ್ಲಿ ಪ್ರಾರಂಭ....
ಕಣ್ಣಂಚಿಗು ಸಿಗುವ ಸೊಲ್ಲಿಲ್ಲವಿಂದು!
ಕನ್ನಡಿಯೆ ಬಿಂಬಿಸುತ್ತಿಲ್ಲ ಪ್ರತಿಬಿಂಬ
ನೀ ಇಲ್ಲದೆ ನನ್ನೊಂದಿಗೆ........
ನೀರಿಲ್ಲದ ಈ ಹೃದಯದ ಕೆರೆಯಲ್ಲಿ
ನಿನ್ನ ನೆನಪುಗಳ ಗೋಲಿಯಾಟ!
ಬಂದು ಬಿಡು ನನ್ನರಸಿ ಆದಷ್ಟು ಬೇಗ
ನನ್ನಿ ಹೃದಯದರಮನೆಗೆ
......................ಹಿಂತಿರುಗಿ
- ಮಂಜು
16 May 2020, 08:20 pm
Download App from Playstore: