ಹೆಣ್ಣಿನ ಅಂದ

ಹಸಿರಿನ ರಾಶಿಗಳ ನಡುವಿನಲಿ
ಮಿಂಚಿನಂತೆ ಹೂಳೆದ ನಿನ್ನ ಕಂಗಳು
ಪರ್ವತಗಳಿಗೆ ದಾರಿ ತೋರಿಸುವಂತೆ
ನೀಳವಾದ ನಿಲುವು ನಿನ್ನದು
ಚಂದುಟಿಗಳಲಿ ನೀ ಬೀರುವ ಆ ನಸು ನಗು
ಅದು ನನ್ನ ಹೃದಯದ ಹೂಂಬೆಳಗು

ತಾಯಿಯಂತೆ ನಿನ್ನ ಮಮತೆ
ಗೆಳತಿಯಂತೆ ನಿನ್ನ ಆತ್ಮೀಯತೆ
ಸೋದರಿಯಂತೆ ನಿನ್ನ ಕಾಳಜಿ
ಹೋಲಿಸಲಾರೆ ನಿನ್ನ ಪ್ರೀತಿಯನ್ನು ಯಾರೊಂದಿಗು
ಇಷ್ಟೆಲ್ಲ ಗುಣವತಿ ನನ್ನ ಮಡದಿ ಇವರೇ ಭಾರತೀಯ ನಾರಿ ಹೇ ನಾರಿ ದಯಮಾಡಿ ಮುನಿಯದಿರು ಇನ್ನೂಂದು ಬಾರಿ

ನಾನು ನನ್ನದು ಎನ್ನುವುದು ಏನೂ ಇಲ್ಲ
ಪರಮಾತ್ಮನೇ ನೀನೆ ನನಗೆಲ್ಲ
ಬಾ ನನ್ನ ತಂದೆಯೇ ಸೇರಿಯಸು ನನ್ನ ಬಾಳ ದಡೆಗೆ ಅಲ್ಲಿದೆ ನನ್ನ ಮಮತೆಯ ತಾಯಿಯ
ಮಡಿಲು ಅದುವೆ ಎಲ್ಲಕ್ಕಿಂತ ಮಿಗಿಲು....

- RoopaGowtham

16 May 2020, 08:48 pm
Download App from Playstore: