ಗೆಳತಿ ನೀ ಸೋತೆ
ಗೆಳತಿ ನನ್ನ ಭಾವನೆಗಳನ್ನ ತುಂಬಿ
ಮನದಾಸೆಗಳನ್ನ ಮನಬಿಚ್ಚಿ
ಬರೆದೆ ನಿನಗಾಗಿ ಕವಿತೆ.
ನೀ ಅದನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ಸೋತೆ.
ಅದೇ ಹತಾಶೆಯಲ್ಲಿ ನಾ ಸತ್ತೆ.
ಇಂದು ಪ್ರತಿ ಸಾಲುಗಳನ್ನ ಪದೇ ಪದೇ ಓದುತ್ತಿರುವೆ
ನಿನಗೆ ಅರ್ಥವಾದರೂ ನಾ
ಪ್ರಪಂಚವೇ ಬಿಟ್ಟು ಹೋಗಿರುವೆ.
ನಿನ್ನ ಮನದಾಸೆಗಳನ್ನ ಅಂದು ಬಚ್ಚಿಟ್ಟು
ಇಂದು ರೋಧಿಸುತ್ತಿರುವೆ.
ಮುಗಿದು ಹೋದ ಸಮಯದ
ಬಗ್ಗೆ ಚಿಂತಿಸಿ ಫಲವೇನು ಗೆಳತಿ.
ಅಂದೂ ನೀ ಸೋತೆ.
ಇಂದೂ ನೀ ಬದುಕಿದ್ದು ಸತ್ತೆ.
✍️ಕನಸುಗಾರ
- varu
18 May 2020, 01:05 pm
Download App from Playstore: