ಪ್ರಕೃತಿ ಮಾತೆಗೆ
ಓಂ ಪ್ರಕೃತಿ ನೀನೇಕೆ ಮೌನ?
ತಾಳಲಾದೀತೆ ನಿನ್ನಿಂದ ಈ ಸಹಜವ
ತಲೆಗೂದಲನೇ ಬೋಳಿಸಿ
ಸುಡುವ ಸೂರ್ಯನ ಉರಿ ಬಿಸಿಲಿಗೆ
ಕಬ್ಬಿಣದ ಸಲಾಕೆ ಹೇರಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!
ಹರಿವ ನೆತ್ತರನು ತಡೆದು
ಅಭಿಧಮನಿಯಲ್ಲಿ ಸೇರಿಸದೆ
ಬೇರೆಲ್ಲೋ ಹರಿಸಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!
ಎದೆಗೂಡಿನ ಮಧ್ಯದಲ್ಲಿ ಸಿಡಿಮದ್ದನ್ನಿರಿಸಿ
ಅತ್ಯಧಿಕ ಶಬ್ದದೊಂದಿಗೆ
ಎರಡಾಗುವಂತೆ ಸಿಡಿಸಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!
ಗರ್ಭಕೋಶವ ಕೂರೆದು
ಬೆಳೆವ ಭ್ರೂಣವ ತೆಗೆದು
ಬಂಜೆಯ ಮಾಡಿದರೂ
ನೀನೇಕೆ ಮೌನ?ತಾಳಲಾದೀತೇ ನಿನ್ನಿಂದ!
ಅಂಜದಿರು - ಹೆದರದಿರು
ಮರಳಿ ಶಪಥವ ಮಾಡು
ಇಂದಲ್ಲ ನಾಳೆ ಮಂದಹಾಸವ ಬೀರಿ
ಹಚ್ಚಹಸುರಿನ ಮೈಬಣ್ಣ ತೋರುವೆನೆಂದು!
- ಕುಂತೂರು ತ ಸುಬ್ರಹ್ಮಣ್ಯ
9482119447
- KT Subramanya
18 May 2020, 02:48 pm
Download App from Playstore: