ಅಚಲ ಪ್ರೀತಿ ನೆನಪು
ಮನದಲ್ಲಿ ಮೂಡಿರುವ ಗೀತೆ,
ಸ್ವರದಿಂದ ಹೊಮ್ಮಲು ಸಾಧ್ಯವೇ ಆ ಗಂಭಿರ್ಯತೆ!
ಮೌನದಲ್ಲಿ ಸಿಲುಕಿರುವ ನನ್ನ ಚಿಂತೆ,
ಬಿಡಿಸಿ ಹೇಳಲಾಗುತಿಲ್ಲ ಆ ವ್ಯಥೆ!
ಮರೆಯಲು ಆಗುತ್ತಿಲ್ಲ ನಿನ್ನ ಮಾತಿನ ಕಂತೆ
ಮಾಸುತ್ತಿಲ್ಲ ನೆನಪಿನ ಬೊಂತೆ
ಸೇರಿಸುವೆ ನನ್ನ ಹೇಸರ ನಿನ್ನ ಜೊತೆ
ಮಾತುಗಳೆಲ್ಲ ನಿನ್ನಂತೆಯೇ ಕಲಿತೆ
ಬರಹಗಳೆಲ್ಲ ನುಡಿದವು ಕವಿತೆ
ಸ್ಮರಿಸದ ಕ್ಷಣವಿಲ್ಲ ನಿನ್ನ ಓ ವನಿತೆ
ಯಾಕೆ ಕಾಡುವೆ ನನ್ನ ಪ್ರಾಣಕಾಂತೆ
ಮನದಲ್ಲಿ ಸ್ಥಿರವಾಗಿ ಉಳಿದ ಓ ನನ್ನ ದೇವತೆ!
- Shivakumara S
18 May 2020, 10:24 pm
Download App from Playstore: