*******
*ನಿರ್ಣಯ*
*ನಿರ್ಣಯ*
**************
*ತಿರುಗುತ್ತಿದೆ ನಭೋಮಂಡಲದ*
*ಗ್ರಹಗಳೆಲ್ಲವೂ ಒಂದರ ಹಿಂದೊಂದು*
*ಕೆಲವೊಮ್ಮೆ ವಿಕೋಪಗಳು*
*ಸುನಾಮಿ,ಭೂಕಂಪ,ಜ್ವಾಲಾಮುಖಿ,*
*ಕೊರೋಣ,ಏನೇನೋ,*
*ಇಲ್ಲಿ ಯಾರು ಸುಖಿ* *?*
*ಆದೆಷ್ಟೋ ಕನಸುಗಳು*
*ಮೋಡಗಳ ಸೀಳಿ ಮುಗಿಲಲ್ಲಿ ತೇಲಿ*
*ಹಾರುವ ಆ ಹಕ್ಕಿಯ ಹೊಟ್ಟೆಯೊಳಗೆ*
*ಭೂ ಸ್ಪರ್ಷಿಸಲು ಕೆಲವೇ ಕ್ಷಣ*
*ತಮ್ಮವರ ಕಾಣ ತವಕಿಸುತ್ತಿದ್ದ ಮನ*
*ವಿಧಿ ಬಗೆದದ್ದೇ ಬೇರೆ*
*ಸಾವು ಬೆನ್ನಿಂದ ಇರೋವಾಡಿಕೆ*
*ನಡುಗಿಸಿತಂದು ನರ ಹೃದಯವ*
*ಕಣ ಕಣವನ್ನೂ ಕಂಪಿ ಕರಗಿಸಿತು*
*ಕೆಂಜಾರುವಿನ ಮುರುಗುಟ್ಟುವ*,
*ಒಣಗಿದೆಲೆಗಳು ಸದ್ದಾಗುವುದರೊಂದಿಗೆ*
*ಕನಸುಗಳಿಗೆ ಕೊಳ್ಳಿಯಿಟ್ಟ 22.2010*
*ಬದುಕಿನಲಿ ಮರೆಯಲಾಗದ*
*ಅವೊಂದು ಕರಾಳ ದಿನ*
*ಜಗತ್ತಿನೆಲ್ಲೆಡೆ ಮಸಣ*
*******
*ಎಚ್ಚಾರ್ ಆರ್ಕುಳ*
- Haroon Rasheed
23 May 2020, 01:45 pm
Download App from Playstore: