ಪ್ರೀತಿಯ ಅರ್ಥದಲ್ಲಿ
ಪ್ರೀತಿಯಲ್ಲೇ ಉಸಿರು ಕಟ್ಟಿಸುವುದು
ಪ್ರೀತಿಯೇ ?
ಪ್ರೀತಿಯಲ್ಲೇ ಉಸಿರಾಡುವಂತೆ ಮಾಡುವುದು
ಪ್ರೀತಿ, ಅಲ್ಲವೆ?
ಹಿಂಬಾಲಿಸಲು ಹಂಬಲಿಸುವುದು
ಪ್ರೀತಿಯೇ ?
ನಂಬಿಕೆಯಲಿ ಜೊತೆ ನಡೆಯುವುದು
ಪ್ರೀತಿ, ಅಲ್ಲವೇ?
ಸಲ್ಲದ ಮಾತನಾಡಿ ಮನ ಕಹಿ ಮಾಡುವುದು
ಪ್ರೀತಿಯೇ?
ಸತ್ಯದ ಸವಿ ತಿಳಿದು ಕವಿಯಾಗುವುದು
ಪ್ರೀತಿ, ಅಲ್ಲವೇ?
- dvja
25 May 2020, 08:17 am
Download App from Playstore: