ಮೃತದೇಹ ಮನುಜನಿಗೆ ಹೇಳಿದ ಸಾಲು
ಬರುವೆ ನೀನು ಒಮ್ಮೆ
ನಾನಿರುವ ಜಾಗಕೆ
ಕಾದು ಕುಳಿತಿದೆ ಗುಂಡಿ
ನಿನ್ನಯ ಸ್ವಾಗತಕೆ
ನಿನ್ನ ಪ್ರಾಣ ನಿನ್ನದಲ್ಲ
ಓಡುವ ಕಾಲ ನಿಲ್ಲುವುದಿಲ್ಲ
ಬಂಧುಗಳೇಲ್ಲ ನಿನ್ನವರಲ್ಲ
ಬರುವೆ ಒಮ್ಮೆ ಈ ದಾರಿಯ ಹುಡುಕಿ
ಬರೆದುಕೋ ವಿಳಾಸವ
ಇರುವ ತನಕ ಅಲ್ಲಿ
ಮಾಡದಿರು ಮೋಸವ
ಬಂದಾಗ ನೀ ಇಲ್ಲಿ
ಲೆಕ್ಕ ನೋಡುವರು
ನೀ ಮಾಡಿದ ಅಸ್ತಿಯನ್ನಲ್ಲ
ನೀ ಮಾಡಿದ ಹಣವನ್ನಲ್ಲ
ನಿನ್ನಲ್ಲಿರುವ ಗುಣವನ್ನ
ನೀ ಮಾಡಿದ ಪುಣ್ಯವನ್ನ
ನೀ ಇಲ್ಲಿಗೆ ಬರುವಾಗ
ನಿನ್ನವರ ಕಣ್ಣಲ್ಲಿ ನೀರಾಗು
ನೊಂದವರ ಬಾಳಿಗೆ ಬೆಳಕಾಗು
ನಿನ್ನ ತಾಯಿಗೆ ಹೆಮ್ಮೆಯ ಕಂದನಾಗು
ತಂದೆಗೆ ತಕ್ಕ ಮಗನಾಗು
ಊರಿಗೆ ಹೆಸರಾಗು
ದೇಶವೇ ಹೊಗಳುವ ಪ್ರಜೆಯಾಗು
- ಸತೀಶ್ ಕುಮಾರ್ ಕಳುವರಹಳ್ಳಿ
31 May 2020, 02:16 pm
Download App from Playstore: