ಈ ಹೃದಯದಿ ನಿನ್ನ ಹೆಸರಿದೆ
ಈ ಹೃದಯದಿ ನಿನ್ನ ಹೆಸರಿದೆ - ೬
ಕೀರ್ತಿ ಸೌರಭ್ ಕೈಯಲ್ಲೊಂದು ಮುದ್ದಾದ ಬಾರ್ಬಿ ಗೊಂಬೆ ಹಿಡಿದು ಆಸ್ಪತ್ರೆ ಎದುರು ನಿಂತ. ಕಣ್ಣಿಗೆ ಕಂಡದ್ದು ನೀಲಾಂಜನ್ ಅವರು. ಅದೇ ಸಮಯಕ್ಕೆ ಅವರ ನೋಟ ಸಹ ಇವನ ಮೇಲೆ, ಕಂಡೊಡನೆ ನಗುತ್ತಾ ಇಬ್ಬರೂ ಸನಿಹಿಸಿದ್ದರು
"ಸರ್ಪ್ರೈಸ್ ಕೀರ್ತಿ ವೆಲ್ಕಂ ಮೈ ಬಾಯ್ ವೆಲ್ಕಂ"
ಎಂದಾಗ ಆತ್ಮೀಯವಾಗಿ ನಗೆ ಬೀರಿದರು. ಅವನ ಹೆಗಲ ಬಳಸಿ ಜೊತೆಗೆ ಕರೆದಕೊಂಡು ನಡೆದರು. ಆಸ್ಪತ್ರೆ ಒಳ ನಡೆಯುತ್ತಿದ್ದಂತೆ, ಎಲ್ಲರನ್ನ ಕಂಡು ಅವರೆಡೆಗೆ ಕರೆದು ಬಂದರು.
"ಇವ್ನೇ ನನ್ ಫ್ರೆಂಡ್ ಸಂಪತ್ ಸೌರಭ್ ಮಗ
ಕೀರ್ತಿ ಸೌರಭ್. ನೋಡೋ ಆಕಾಶ್ ಇವ್ನು ಅವರಪ್ಪ ಮಾತ್ ಕೇಳಿ ಲಾಯರ್ ಆದ. ಅದು ನನ್ನನೇ ಮಿರಿಸೋ ಮಟ್ಟಿಗೆ ಬಂದಿದ್ದಾನೆ. ಐಎಂ ಸೋ ಪ್ರ್ವೌಡ್ ಆಫ್ ಯು ಮೈ ಬಾಯ್"
ಎಂದು ಬೆನ್ನು ತಟ್ಟಿದರು.
"ಮತ್ತೆ ಕೀರ್ತಿ ಇದು ನನ್ ಫ್ಯಾಮಿಲಿ ಇವ್,,,
ಮಾತು ಪೂರ್ಣಗೊಳ್ಳುವ ಮುನ್ನವೇ ಆಕಾಶ್,
"ಡ್ಯಾಡಿ ಡ್ಯಾಡಿ ಸ್ವಲ್ಪ ಸ್ಟಾಪ್ ಮಾಡ್ತೀರಾ. ಮಾ,,, ನಮ್ ಹಾಸ್ಪಿಟಲ್ಗೆ ಹೊಸ ಪೇಶೆಂಟ್ ಸಿಕಿದ್ರು, ಯಾರ್ ಗೊತ್ತಾ? ನಮ್ ಡ್ಯಾಡಿನೇ"
" ನಿಜ ಆಕಾಶ್ ಟ್ರೀಟ್ಮೆಂಟ್ ಶುರು ಮಾಡೋದೇ"
ಎಂದು ರೂಪ ಅವರು ನಕ್ಕರು.
" ಯಾಕೆ ಮಿಸಸ್ಸ್ ನೀಲಾಂಜನ್ ಅವರೇ? ನಿಮ್ಗೆ ಪೇಶೆಂಟ್ ಸಿಗ್ತಾ ಇಲ್ವಾ?"
ಎಂದು ಕೇಳಿದಾಗ, ಮತಷ್ಟು ನಕ್ಕ ಆಕಾಶ್,
"ಡ್ಯಾಡಿ ಕೀರ್ತಿ ಪರಿಚಯ ಮೊದ್ಲೇ ಇದೆ. ನೀವೇ ಮಾಡ್ಸಿದ್ದೀರಾ"
"ಹೋ ಮರ್ತೆ ಬಿಟ್ಟಿದೆ ನಾನು"
ಎಂದು ತಲೆ ಕೆರೆದುಕೊಂಡರು.
ಮುಂದುವರೆಯುತ್ತದೆ,,,,,
- ಹಂಸ ಕುಲಾಲ್ ✍️✍️✍️
- ಹಂಸವೇಣಿ
04 Jun 2020, 03:17 pm
Download App from Playstore: