ನೆನಪು

ಬುದ್ದಿ, ಮನಸ್ಸು ವಿಚಿತ್ರ ವರ್ತಿಸುತಿತ್ತು
ಆಗ ಪರಿಸ್ಥಿತಿ ತುಂಬಾ ಚೆನ್ನಾಗಿತ್ತು!
ಬುದ್ದಿ ,ಮನಸ್ಸು ಏಕಾಂತದಲ್ಲಿತ್ತು
ಆದರೂ ಪರಿಸ್ಥಿತಿ ತುಂಬಾ ಕೆಟ್ಟಿತ್ತು!
ಕಂಡರೂ ಕಾಣದಂತೆ ಇತ್ತು
ಕಾಣದಿದ್ದರೂ ಬರಿ ನೆನಪಾಗೆ ಕಾಡುತಿತ್ತು
ಮರೆಯಾದ ಕ್ಷಣವೆ ಕತ್ತಲಾಗ ತೊಡಗಿತ್ತು!
ಶಾರೀರಿಕ ಯಾತನೆ ಬುದ್ದಿ ಮನಸ್ಸು ಎಲ್ಲಾವನ್ನು ಹಿಂಸಿಸುತಿತ್ತು!
ಕ್ಷಣ ಕ್ಷಣಕ್ಕೂ ಜೀವನದ ಮೌಲ್ಯಗಳನ್ನ ಪ್ರಶ್ನಿಸುತಿತ್ತು!
ಕಳೆದುಹೋದದ್ದನ್ನೆ ಪ್ರತಿಕ್ಷಣವೂ ಚಿಂತಿಸುತಿತ್ತು!
ದಾರಿನೂರಿದ್ದರೂ ದುಃಖದ ಮಡುವಿನಲ್ಲಿ ಮುಳುಗುತ್ತಿತ್ತು!
ಎಲ್ಲವನ್ನೂ ತಿಳಿಯದೆ ತೇಲಿ ತೆಗಳುತಿತ್ತು!
ಕೊನೆಗೂ ತನನ್ನು ತಾನೆ ತಿಳಿಯದೆ ದೋಣಿ ಮುಳುಗಿತ್ತು!
ಅಂಬಿಗನಿಗೆ ಗುರಿಯೆ ಬಾರದೆ ಹೋಗಿತ್ತು!

- Shivakumara S

05 Jun 2020, 11:04 pm
Download App from Playstore: