ಮೋಸದ ಪ್ರೀತಿ
ತುಂಬ ನೋವಲಿದ್ದ ಮನಕ್ಕೆ
ನಗುವಾಗಿ ಬಂದೆ ನೀನು.
ಕಾಣದ ಪ್ರೀತಿಯ ನೀ
ಕಣ್ಮುಂದೆ ತೋರಿಸಿದವಳು ನೀ.
ಬೇಜಾರಲ್ಲಿ ಕೂತಾಗೆಲ್ಲಾ
ನನ್ನ ಮೊಗದಲ್ಲಿ ನಗುವ ತರಿಸಿದವಳು ನೀ.
ಕಷ್ಟವೆಂದಾಗಲೆಲ್ಲಾ ನನ್ನ
ಕಷ್ಟಕ್ಕೆ ನಾ ಸ್ಪಂದಿಸುವೆ ಎಂದವಳು ನೀ.
ಅಂದು ದುಖ:ದಲ್ಲಿದ್ದಾಗಲೆಲ್ಲಾ ಸಮಾಧಾನಿಸಿದವಳು ನೀ.
ಇಂದು ನಿನ್ನ ನೆನಪಲ್ಲಿ ನಾ
ಕಣ್ಣೀರ ಸುರಿಸುತ್ತಿದ್ದರೂ
ಒಂಟಿಯಾಗಿ ನರಳುತ್ತಿದ್ದರೂ
ನೀ ಏಕೆ ಬರುತ್ತಿಲ್ಲಾ ನನ್ನ ಸನಿಹ.
ನಾ ಏಕೆ ಬೇಡವಾದೆ ನಿನಗೆ.
ಪ್ರತಿ ಬಾರಿ ಮೋಸವಾಗುವುದು
ಏಕೆ ನನಗೆ.
ಈ ಪ್ರೀತಿ ಮಾಯೆಯೋ
ಇಲ್ಲಾ ಪ್ರೀತಿಯ ನಾಟಕ ಮಾಡುವವರು ಮಾಯಯೋ
ತಿಳಿಯದಾಗಿದೆ ಈ ಮನಕೆ.
✍️ಕನಸುಗಾರ.
- varu
07 Jun 2020, 08:03 am
Download App from Playstore: