ಜೀವನ

ಹುಟ್ಟು ಸಾವಿನ ನಡುವೆ
ಮೂರು ದಿನದ ಬಾಳ್ವೆ
ಸತ್ಯ ಸುಳ್ಳು ಲೆಕ್ಕದ ನಡುವೆ
ಗೆಲ್ಲುವುದು ಯಾವಾಗಲು ಸತ್ಯವೇ

ಜೀವನಕೆ ಮಾಡುವರು ಹೋರಾಟ
ನನ್ನದು ನಿನ್ನದು ಎನ್ನುವ ಹೊಡೆದಾಟ
ಯಾಕೆ ಇಷ್ಟೊಂದು ಪರದಾಟ
ಯಾರಿಗೂ ಇಲ್ಲ ತಾಳ್ಮೆಯ ಪಾಠ

ಹುಟ್ಟಿದ ನಂತರ ಬರುವುದು ಸು:ಖದು:ಖಗಳು
ಸುಳ್ಳಿನ ಹಾದಿ ಯಾವಾಗಲು ಗೋಳು
ಸತ್ಯದ ಬದುಕಿಗೆ ಬರದು ಸೋಲು
ಇದನ್ನು ಅರಿತು ಯಾವಾಗಲು ಬಾಳು


ವಿನೋದ್ ಡಿಸೋಜ

- AAA little star

07 Jun 2020, 01:45 pm
Download App from Playstore: