ನನ್ನ ತಮ್ಮ
ಒಡಲ ಹಂಚಿಕೊಂಡ ನಿನಗೆ ಉಸಿರಲ್ಲಿ ಪಾಲು ಕೊಟ್ಟಾಯ್ತು ನಿನ್ನ ಅಮ್ಮನ ಮಡಿಲಲ್ಲಿ ಕಂಡಾಗಲೇ.
ನೋವನಂಚಿಕೊಳ್ಳುವೆ ನಲಿವಲ್ಲಿ ನಾನು ನಗುವಾಗುವೆ ಮನದಲ್ಲಿ ಇನ್ನೂ ಪುಟ್ಟ ಮಗುವು ನೀನು ನನಗಿಂತ ಎತ್ತರ ಬೆಳೆದರೂನು.
ನಿನ್ನಾಸೆ ಕನಸೆಲ್ಲಾ ನನಸಾಗಲಿ,
ನೀ ಸಾಗುವ ಹಾದಿಯಲ್ಲಿ ಕಲ್ಲು ಮುಳ್ಳು ಪ್ರೀತಿಯ ಹೂವಾಗಲಿ.
ನೂರು ಜನುಮ ಕಳೆದರೂನು
ನನ್ನ ಮೊದಲ ಗೆಳೆಯ ನೀನು,
ತಮ್ಮನಾದರೇನೂ ಅಪ್ಪನ
ಇನ್ನೊಂದು ರೂಪ ನೀನು.
- ಚುಕ್ಕಿ
07 Jun 2020, 08:29 pm
Download App from Playstore: