ನಮ್ ಕನ್ನಡ ಶಾಲೆ ನೆನಪು..

ನೆನಪಿನ ಬುತ್ತಿಯಿಂದ ಕಿರುನಕ್ಕು ಹೃದಯದಲ್ಲಿ ಇಣುಕಿನುಕಿ ಆಯ್ದುಕೊಂಡ ಸಾಲುಗಳಿವು.

ಸರ್ಕಾರಿ ಪ್ರೌಢಶಾಲೆ ಬೆಂಗಳೂರು ಇದೆ ನಮ್ ಶಾಲೆ ಹೆಸರು ಇಲ್ಲಿ ಕನ್ನಡ ಹೆಚ್ಚು ಇಂಗ್ಲಿಷ್ ಕಡಿಮೆ. ಇದ್ದಿದ್ದು ಆರು ಜನ ಟೀಚೆರ್ಸ್ 3 ಕ್ಲಾಸ್ ರೂಮ್ಸ್ ಆದರೆ ಮನತುಂಬಿದ ನೆನಪುಗಳು ಮಾತ್ರ ಸಾವಿರಾರು.

ಒಂದಿನ ಹೀಗೆ ನನ್ ಫ್ರೆಂಡ್ಸ್ ಖುಷಿಯಾಗ್ ಮಾತಡ್ಕೊತಿದ್ರು ನಾನು ಹೋಗಿ ಏನಾಯ್ತು ಯಾಕಿಷ್ಟ್ ಖುಷಿ ಅಂತ ಕೇಳ್ದೆ ಅದಕ್ಕೆ ಅವ್ರು ನಿಂಗೊತ್ತಿಲ್ವ ನಮ್ ಸ್ಕೂಲ್ನಲ್ಲಿ ಹೊಸ ಕಂಪ್ಯೂಟರ್ ತಂದಿದರೆ ಕಣೆ ಅದನ್ನ ಹೇಳ್ಕೊಡೋಕೆ ಹೊಸ ಟೀಚರ್ ಕೂಡ ಬಂದಿದರೆ ಅಂತ ಹೇಳಿದ್ರು. ಹೌದ, ಎಲ್ಲಿದರೆ ಹೇಗಿದರೆ ಅಂತ
ಕೂತೂಹಲದಿಂದ ಕೇಳ್ದೆ ತುಂಬಾ ಚನ್ನಾಗಿದರೆ ಕಣೇ ಆಫೀಸ್ ರೂಮಿನಲ್ಲಿ ಇದರೆ ಈಗ ಎಡ್ ಮಾಸ್ಟರ್ ಹತ್ರ ಮಾತಾಡ್ತಿದರೆ ನಮ್ ಟೈಮ್ ಟೇಬಲ್ನಲ್ಲಿ ಇನ್ನೊಂದು ಪಿರಿಯಡ್ ಸೇರಿಸಿದ್ದಾರೆ ಆಮೇಲೆ ಕೊಡ್ತೀನಿ ಬರ್ಕೊ ಅಂತ ನನ್ ಫ್ರೆಂಡ್ ಹೇಳಿದಳು.

ಅದೇ ಮೊದಲ ಬಾರಿಗೆ ಕಂಪ್ಯೂಟರ್ ನಮ್ಮ ಶಾಲೆಯಲ್ಲಿ ಕಂಡಿದ್ದು ನಾವು. ಟೀಚೆರ್ ಬಂದು ನಮ್ಮನ್ನು ನಮ್ಮ ಪುಟ್ಟ ಲೈಬ್ರರಿಗೆ ಕರ್ಕೊಂಡೋಗಿ ಎಲ್ಲರಿಗೂ ಒಂದೊಂದು ಪುಸ್ತಕ ಕೈಯಲ್ಲಿಟ್ಟು ಅಟೆಂಡನ್ಸ್ ಪ್ರಕಾರ ಕರಿತಿನಿ ಬನ್ನಿ ಮೂರ್ ಮೂರ್ ಜನ ಪೈಂಟಿಂಗ್ ಹೇಗ್ ಮಾಡೋದು ತೋರಿಸ್ತೀನಿ ಅಂತ ಹೇಳಿದ್ರು ನಮಗೆ ಎಲ್ಲಿಲ್ಲದ ಸಂಭ್ರಮ. ಯಾವಾಗ್ಲೂ ನನ್ನೆಸ್ರು ಯಾಕಾದ್ರು ಬಿ ಅಲ್ಲಿಟ್ರೋ ನಮ್ಮಮ್ಮ ಎಸ್ ಅಥವಾ ಎನ್ ನಲ್ಲಿ ಇಡಬರ್ದಿತ್ತಾ ಅನ್ಕೋತಿದ್ದ ನಾನು ಮೊದಲ ಬಾರಿಗೆ ಖುಷಿ ಪಟ್ಟ ದಿನವದು.

ಹಸಿರಿನಿಂದ ಉಸಿರಾಡುತ್ತಿದ್ದ ಮೈದಾನ ನಮ್ಮದು ಮೈದಾನ ಅಂದ್ರೆ ನೆನಪಾಗೋದು ನಮ್ಮ ಪಿಟಿ ಸರ್ ತುಂಬಾ ಒಳ್ಳೆ ಮನುಷ್ಯ ಅಷ್ಟೇ ಕೋಪಿಷ್ಠ ಹತ್ತನೇ ಕ್ಲಾಸ್ ಮುಗಿಯೊವರೆಗೂ ಅವರನ್ನ ಬೈಕೊಳ್ದೆ ಇರೋ ದಿನಾನೆ ಇಲ್ಲ ನೋಡಿ ಶಾಲೆ ಶುರುವಾಗೋದು 9ಕ್ಕೆ ಆದ್ರೆ ಇವ್ರು ಬರ್ತಿದ್ದಿದ್ದು 7ಕ್ಕೆ ನಾವ್ ಬರ್ಬೇಕಾಗಿದ್ದು 8 ಗಂಟೆಗೆ ಒಂದ್ ನಿಮಿಷ ಲೇಟ್ ಆದ್ರುನೂ ಮೈನ್ ಗೇಟ್ ಕ್ಲೋಸ್ ಮಾಡ್ಬಿಡ್ತಿದ್ರು ಕೋಲೊಂದು ಹಿಡ್ಕೊಂಡ್ ನಿಂತ್ಕೋತಿದ್ರು.

ಅದೆಷ್ಟ್ ದಿನ ಅವ್ರ್ ಕಣ್ ತಪ್ಸಿ ಕ್ಲಾಸ್ ಗೆ ಓಡೊಗಿದಿವೋ ದೇವರಿಗೆ ಗೊತ್ತು ಗೋಡೆ ಹತ್ತೋದು ಕಲಿತಿದ್ದು ಇವರಿಂದಾನೆ. ಶನಿವಾರ ಬಂದ್ರಂತು ವಾರಗಳ ಸಾಲಲ್ಲಿ ಈ ಶನಿವಾರ ಯಾಕಿದೆ ದೇವ್ರೇ ಅನ್ಸೋದು ಯಾಕಂದ್ರೆ ಅವತ್ತು ನಮ್ಗೆ ಯೋಗ ಡೇ ಅಂತಾನೆ ಹೇಳ್ಬೋದು ಮುಂಜಾನೆ 7ಕ್ಕೆ ಶುರುವಾಗಿ ಯೋಗ ಏರೋಪಿಕ್ಸ್ಗಳು ಮುಗಿಯುತ್ತಿದ್ದಿದು 9ಕ್ಕೆ ಸಾರೆ ಜಹಾಂಸೆ ಅಚ್ಚ ಇಂದಾನೆ ಕೊನೆಲಿ ಮೂರು ಚಪ್ಪಾಳೆ ಜೊತೆಗೆ.

ಸೂರ್ಯ ನಮಸ್ಕಾರ, ಪ್ರಾಣಾಯಾಮ ದೇಶ ಭಕ್ತಿ ಗೀತೆ , ಭಾವ ಗೀತೆ ಹೀಗೆ ಎಲ್ಲದರಲ್ಲೂ ಪ್ರಾವೀಣ್ಯತೆ ಹೊಂದಿರುವ ನಮ್ಮ ಸಾರ್ ಎಲ್ಲರನ್ನೂ ಗಾಯಕರಾಗಿಸುವ ಕನಸು ಕಟ್ಟಿದ್ರು ಅನ್ನಿಸುತ್ತೆ ಚನ್ನಗ್ ಹಾಡೋವ್ರು ಸ್ಟೇಜ್ ಮೇಲೆ ಹಾಡದೆ ಇರೋವ್ರು ಸ್ಟೇಜ್ ಮೇಲೆ ಇರ್ತಿದ್ರು ಹಾಡೋವ್ರು ಬೆಸ್ಟ್ ಎಕ್ಸಾಮ್ಪಲ್ ಹಾಡದೆ ಇರೋವ್ರು ವರ್ಸ್ಟ್ ಎಕ್ಸಾಮ್ಪಲ್ ಆಗ್ತಿದ್ರು. ನಮ್ ಕ್ಲಾಸ್ ನಲ್ಲಿ ಹುಡುಗರಂತೂ ಇವರ ಮೇಲೆ ಹಾವಿನಂತೆ ದ್ವೇಷ ಸಾದಿಸೋವ್ರು ಕಣ್ಮರೆಯಾದ್ರೆ ಸಾಕು ಅವರ ಸ್ಕೂಟರ್ ಪಂಚರ್ ಮಾಡಿ ಕುಲ್ಫಿ ತಿಂದು ವಿಜಯ ಸಂಭ್ರಮಿಸೋವ್ರು.

ಅಂದಹಾಗೆ ನಮ್ ಎಡ್ ಮಾಸ್ಟ್ರು ಇವ್ರನ್ನ ಮರಿಯೋಕೆ ಆಗೋದಿಲ್ಲ ಚಪಾತಿ ಬಿಟ್ಟು ಬೇರೆ ಊಟ ಇವರ ಜನ್ಮದಲ್ಲಿ ತಿಂದಿಲ್ವೇನೋ ಅನ್ಸೋದು ನಂಗೆ ಎನ್ ತಿಂದ್ರಿ ಸಾರ್ ಅಂದಾಗೆಲ್ಲಾ ಚಪಾತಿ ಅನ್ನೋವ್ರು. ಕನ್ನಡ ಭಾಷೆಯನ್ನು ಹೇಳಿಕೊಡುತ್ತಿದ್ದರೂ ಹತ್ತು ವಾಕ್ಯಗಳಲ್ಲಿ ಉತ್ತರಿಸಿ ಪ್ರಶ್ನೆಗೆ ಎರಡು ವಾಕ್ಯಗಳಲ್ಲಿ ಉತ್ತರಿಸೋದು ಇವರಿಂದಾನೆ ಕಲಿಬೇಕು ನೋಡಿ. ಗಣಿತ ಅಂದ್ರೆ ತಲೆನೋವ್ ಬರ್ತಿದ್ದ ನನಗೆ ಅದನ್ನ ಬಿಟ್ಟು ಕನ್ನಡ ಸಬ್ಜೆಕ್ಟ್ ಒಂದನ್ನೇ ಮೂರ್ ದಿನ ಓದೋ ಹಾಗೆ ಮಾಡಿದ್ದು ಇವರ ಟೀಚಿಂಗ್.

ಮಧ್ಯಾಹ್ನದ ಹುಡುಗರ ರಂಪ್ ವಾಕ್ಗಳು, ಒನ್ ಸೈಡ್ ಲವ್ಗಳು ಸೈಕಲ್ನಲ್ಲಿ ರೌಂಡ್ ಗಳು ಹೇಳಿದಷ್ಟೂ ಕಡಿಮೆ ಬಾಲ್ಯದ ನೆನಪುಗಳು...

- ಚುಕ್ಕಿ

10 Jun 2020, 08:12 pm
Download App from Playstore: