ಎನು ಇಲ್ಲದ ಮೇಲೆ...‌‌‌‌‌

ಹುಡುಕಿದಷ್ಟು ದೂರ ಸಿಗಲಿಲ್ಲ
ಪುಟ್ಟದೊಂದು ಗೂಡು
ಬೆಚ್ಚಗೆ ಇದ್ದು ಬಿಡಲು......

ನಡೆದಷ್ಟು ಕಲ್ಲು ಮುಳ್ಳು
ಸಿಗಲೆ ಇಲ್ಲ ಹಸಿರಾದ ನನ್ನದೊಂದು ಊರು.....

ಎಣಿಸಿ ಪೊಣಿಸಿದರು ನನಗಾಗಿ
ಕೂಡಿಟ್ಟಿರಲಿಲ್ಲ ಬಂಗಾರದ ಹೊನಲು....‌.

ನಗುನಗುತ ಹರಸಿ ಬಂದರು
ಬರೆದಿರಲಿಲ್ಲ ನನ್ನ ಹೆಸರು
ಅನ್ನದಗುಳಿನಲ್ಲಿ...........

ದುಖಃದೊಳಗಿನ ಮುತ್ತು ಉದುರಿದರು
ಕೈಯೋಂದು ಇರಲಿಲ್ಲ ನನ್ನದೆಂದು ಮರೆತು ಬಿಡಲು......

ನಿಂತ ನಿಲುವಲ್ಲಿ ಎಲ್ಲವ ತೊರೆದು ಜೊತೆಯಾದರು
ಕೈ ಹಿಡಿದ ಜೀವ ಜೊತೆಯಾಗಲಿಲ್ಲ ಎಂದಿಗು........





ರಾಗ......

- ರಾಗಸಿರಿ....

10 Jun 2020, 11:05 pm
Download App from Playstore: