ಒಂದಾಗಬೇಕಿದೆ

ಈ ಕೊರೊನ ಸಂಕಟದಲಿ
ಕೆಲಸವಿಲ್ಲದೆ ಹಣವುಇಲ್ಲದೆ
ತಿನ್ನಲು ಅನ್ನವೂ ಸಿಗದೆ
ಹಸಿದ ಹೊಟ್ಟೆ ಹೊತ್ತುಕೊಂಡೇ
ನಡೆಯುತ್ತಿದ್ದಾರೆ ತಮ್ಮೂರಿನಡೆಗೆ....

ನಮ್ಮ ನಿಮ್ಮ ಸೇವೆ ಮಾಡಿದ
ಈ ಬಡ ಕಾರ್ಮಿಕರಿಗಿಂದು
ಬಂದಿದೆ ಎಲ್ಲಿಲ್ಲದ ಸಂಕಟ
ಒದಗಿಬಂದಿದೆ ಕರ್ತವ್ಯವೊಂದು
ಕಯ್ಯಲ್ಲಾದ ಸಹಾಯ ಮಾಡೋಣ ಇವರಿಗಿಂದು....

ಈ ಕಷ್ಟದ ಸಮಯದಲ್ಲಿ
ಜಾತಿ ಧರ್ಮದ ಭೇದವಿಲ್ಲದೆ
ಸಹಾಯ ಮಾಡಿ ಸಂಕೋಚವಿಲ್ಲದೆ
ಈ ಯುದ್ಧ ಗೆಲ್ಲಬೇಕಾದರೆ
ನಾವು ನೀವು ಒಂದಾಗಬೇಕಿದೆ....

― ಅಭಿಷೇಕ್

- AbhishekSR

11 Jun 2020, 02:42 pm
Download App from Playstore: