ಸು- ಶಾಂತ
ಮೆರವಣಿಗೆ ಸಾಗಿದೆ
ಮಸಣದ ಹಾದಿಯಲ್ಲಿ
ಮರದ ತೇರು ಸಿಂಗರಿಸಿದೆ
ಹೂ.. ಬಿಡಿಗಾಸು ಚೆಲ್ಲಿ
ಎಲ್ಲರ ನಕ್ಕು ನಗಿಸಿ
ಮಲಗಿಹನು ಬಾನತ್ತ ಮುಖ ಮಾಡಿ
ಸಾಗಿಹರು ಸಾವಿರಾರು ಜನ
ಅವ ನಕ್ಕ ತಿರುಗಿ ನೋಡಿ
ಇರುವಾಗ ಕೊಂದವರು
ಸತ್ತಾಗ ಕೊರುಗುವರು
ಬಣ್ಣದ ಈ ಬದುಕಿನಲಿ
ಯಾರಿಹರು ಯಾರಿಗೆ ಇಲ್ಲಿ
ಶಾಂತವಾಯಿತೇ ಆ ಹೃದಯ
ಸು-ಶಾಂತನ ನಗು ಈಗ ಮಾಯ
ಕಾಡಿದೆ ಅವನ ನಿರ್ಗಮನ
ಸಾಕಾಯಿತೇ ಈ ಜೀವನ ಯಾನ
- Tribhuvan
15 Jun 2020, 12:27 pm
Download App from Playstore: