ಭೂಮಾತಾ ಉವಾಚ
ಮಳೆಯು ಸುರಿಯಿತು ಇತ್ತ ಬಾರದೆ
ಎತ್ತ ಹೋದೆಯೋ ರೈತನೆ?
ಸುತ್ತ ಮುತ್ತಲು ನೀರು ಹರಿದಿದೆ
ಬಂದು ಉಳುವೋ ಬೇಗನೇ
ಮುನ್ನ ಮಳೆಯೇ ಇಲ್ಲ ಎಂದು
ನಿನ್ನ ಕಾಯಕ ಮರೆತೆಯಾ
ತನ್ನ ಮನವ ಮುದವಗೊಳಿಸಲು
ಪೇಟೆಯೊಳು ನೀ ನಡೆದೆಯಾ
ಹತ್ತು ಹಲವು ದಿನವು ಕಳೆದು
ನೆಲವು ನಯ-ಹದವಾಗಿದೆ
ಕಳೆದ ಸಮಯ ಮತ್ತೆ ಸಿಗದು
ಬೀಜ ಬಿತ್ತೋ ಬೇಗನೆ
ಬೀಜ ಬಿತ್ತಿ ನೀರ ಹಾಯಿಸಿ
ಹಸಿರು ಸೀರೆಯನುಡಿಸೆಯಾ
ಕಳೆಯ ತೆಗೆದು ಬೆಳೆಯ ಬೆಳೆದು
ನನ್ನ ಒಡಲು ತುಂಬೆಯಾ
ಬೆಳೆಯು ಬಲಿಯಿತು
ಕಟಾವು ಮುಗಿಯಿತು
ನಾ ಬಂಜೆಯಾದೆನು ರೈತನೆ!
ಬಿಸಿಲತಾಪಕೆ ನೀರು ಇಂಗದೆ
ಮತ್ತೆ ಕಾಯುವೆ ಮಳೆಯನೆ
- ಕುಂತೂರು ತ ಸುಬ್ರಹ್ಮಣ್ಯ
ಶೃಂಗೇರಿ
9482119447
- Subramanya K T
17 Jun 2020, 08:39 am
Download App from Playstore: