ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೯

ಅಷ್ಟರಲ್ಲೇ ಆಕಾಶ್, ಸ್ಪಂದನಾ ಅಳು ಕಂಡು ಅಲ್ಲಿಗೆ ಬಂದ.

"ಏನಾಯ್ತು ನನ್ ಸ್ವಿಟಿ ಗೆ?"
ಎನುತ್ತಾ ಅವಳನ್ನ ಎತ್ತಿ ಮುದ್ದಿಸಿದ.

"ಈ ಶೂ ಬೇಡ ಪಪ್ಪಾ ಹು,,, ಹು,,, "
ಎಂದು ರಾಗವಾಗಿ ಅಳಲು ಶುರುವಿಟ್ಟಳು.

"ಬೇಡ ಅಂದ್ರೆ ಬೇಡ"
ಎಂದು ತೆಗೆಯಲು ನೋಡಿದ. ಶ್ರಾವ್ಯ,

"ಅಣ್ಣಾ ನಾನೇ ಹಾಕಿದ್ದು. ಅವ್ಳು ಬೇಡ ಅಂದ್ರೂ ಅಷ್ಟೆ. ಬೇಕು ಅಂದ್ರೂ ಅಷ್ಟೆ"

ಎಂದು ಹುಬ್ಬು ಮೇಲೇರಿಸಿದ್ದಳು.

"ನಿನ್ನ ಬೇಕಾದ್ರೆ ನಾನ್ ಸಮಾಧಾನ ಮಾಡ್ತೀನಿ ನಿನ್ ಅತ್ತೆನಾ ನನ್ ಕೈಲಿ ಆಗಲ್ಲ ಇವತೊಂದಿನ ಸ್ವಿಟಿ "

"ಹಾ,,, "
ಮತ್ತೆ ಅದೇ ರಾಗ. ಆಗ ಶ್ರಾವ್ಯ,

"ಅಣ್ಣಾ ಟೈಮ್ ಆಗ್ತಾ ಇದೆ, ಅವ್ಳು ಹೀಗೆ ಅಳ್ತಾ ಇರ್ಲಿ. ನಾವೇ ಕೇಕ್ ಕಟ್ ಮಾಡಿ ತಿನೋದು ಅಷ್ಟೆ"

ಎಂದಾಗ ಮೂತಿ ಉಬ್ಬಿಸಿದಳು. ಅವಳ ರೀತಿ ನೋಡಿ ಸೌರಭ್ ಗೆ ನಗೆ ಬಂತು ಜೋರಾಗಿ ನಕ್ಕ. ಆಗಲೇ ಇಲ್ಲಿ ಇರುವ ಗುರುತು ದೊರಕಿದ್ದು ಶ್ರಾವ್ಯಳಿಗೆ . ಆಕಾಶ್ ನೆನಪಿಸಿಕೊಂಡು,

"ಹೇಳೋದೇ ಮರೆತೇ ಶ್ರಾವ್ಯ, ಹೀ ಇಸ್ ಮೈ ಫ್ರೆಂಡ್ ಕೀರ್ತಿ.
ಕೀರ್ತಿ ಮೈ ಸಿಸ್ಟರ್ ಶ್ರಾವ್ಯ she is also law student"

ಎಂದಾಗ
ಇಬ್ಬರು ಒಮ್ಮೆಲೇ 'ಹಾಯ್'
ಎಂದರಷ್ಟೆ ಬೇರೆ ಮಾತಿಲ್ಲ.

ಶ್ರಾವ್ಯ, ಸೌರಭ್ ಒಂದು ಬಾರಿಯೂ ಮುಖ ಮುಖಿ ಭೇಟಿ ಆಗಿರಲಿಲ್ಲ. ಮನೆಯವರೆಲ್ಲಾ ಇವನ ಬಗ್ಗೆ ಮಾತನಾಡುವಾಗ ಹೆಸರಷ್ಟೇ ನೆನಪು .ಅವನನ್ನ ನೋಡುವ ಕಾತುರ ಏನು ಇರಲಿಲ್ಲ. ಮೊದಲ ಬಾರಿ ನಗುವಿನ ನಡುವಿನಲ್ಲಿ ಇಂದು ಕಂಡಳು. ಅದೇಕೋ ಕಣ್ಣುಗಳು ಮಾತ್ರ ಕೊಂಚ ಗಮನಿಸಿದ್ದವು. ಜೊತೆಗೆ ಒಮ್ಮೆಯೂ ಸಹ ತನ್ನನ್ನ ಗಮನಿಸಲಿಲ್ಲ ಎಂಬ ಕೋಪ. ಅದೇಕೆ?

ಅವನ ರೀತಿಗೆ ಮನಸಲ್ಲೇ

" ತುಂಬಾ attitude ಇದ್ದಾನೆ"

ಎನುತ್ತಾ ಮುಂದೆ ನಡೆದಳು.

ಮುಂದುವರೆಯುತ್ತದೆ,,,,,

- ಹಂಸ ಕುಲಾಲ್✍️✍️✍️

- ಹಂಸವೇಣಿ

17 Jun 2020, 10:12 am
Download App from Playstore: