ಈ ಹೃದಯದಿ ನಿನ್ನ ಹೆಸರಿದೆ

ಈ ಹೃದಯದಿ ನಿನ್ನ ಹೆಸರಿದೆ-೧೦

ಕೀರ್ತಿ ಬರುತ್ತಿದ್ದಂತೆ ಎಲ್ಲಾ ತಯಾರಿ ಮಾಡಿದ್ದರಿಂದ ಪುಟ್ಟ ಸ್ಪಂದು ಕೇಕ್ ಕಟ್ ಮಾಡಿದಳು. ಆಸ್ಪತ್ರೆ ಸಿಬ್ಬಂದಿ ಎಲ್ಲಾ ಚಪ್ಪಾಳೆ ತಟ್ಟಿ  ಅವಳನ್ನ ಮತಷ್ಟೂ ಸಂತಸ ಪಡಿಸಿದರು.

ಅದೆಷ್ಟು ಸಂತಸದಲ್ಲಿ ಆ ದಿನ ಕಳೆದರೂ ಬಹು ದಿನಗಳ ನಂತರ ಸೌರಭ್ ಅಂತಹ  ಸಂಭ್ರಮದ ಒಂದು ಭಾಗವಾದ.

ಅದೇ ಸಿಹಿ ಕ್ಷಣಗಳ ಜೊತೆಯಲ್ಲಿ ಸಾಗಿದರು.
ಕೊನೆಗೂ ಸೌರಭ್ ತನ್ನ ಮನದ ಅರಸಿಯ ಕಾಣುವಲ್ಲಿ ವಿಫಲನಾದ.

ತನ್ನ ಹೃದಯದ ಗ್ರಂಥಾಲಯದಲ್ಲಿ ಅದೆಷ್ಟೋ ವರ್ಷದ ಹಿಂದೆ ಮುಚ್ಚಿಟಿರುವ ಪುಸ್ತಕ ಅವಳು. ಈ ನೆನಪು ಮತೆಂದು ತೆರೆದು ತನ್ನ ಇರುವಿಕೆಯ ತೋರುತ್ತದೆ ಎಂಬಾ ಒಂದು ಊಹೆಯೂ ಸಹ ಇಲ್ಲ. ಪುಸ್ತಕ ಮುಚ್ಚಿ ಬಹಳ ವರ್ಷಗಳು ಕಳೆದು ಹೋಗಿದೆ.


ಏ ದೇವನೇ ನಾ ಎಣಿಸಿದಂತೆ
ಈ ಜೀವನದ ಅಲೆಗೆ ದಡ ದೊರೆತಿದ್ದೆ
ಆದರೆ ನಿನ್ನ ನಾ ನೆನೆಯುತಿರಲಿಲ್ಲ
ಅದಕ್ಕಾಗಿಯೇ ನನಗೆ ಈ ಹುಡುಕಾಟ

ಸೌರಭ್ ಹೃದಯ ನುಡಿದ ನುಡಿ.

ಮುಂದುವರೆಯುತ್ತದೆ,,,,,

- ಹಂಸ ಕುಲಾಲ್ ✍️✍️✍️

- ಹಂಸವೇಣಿ

18 Jun 2020, 09:55 am
Download App from Playstore: