ನನ್ನವಳು

ನೀ ಎಂದರೇನೇ ,
ನನಗೆ ಒಂದು ರೀತಿಯ ಸಂತೋಷ
ಸಂತೋಷಕ್ಕೇನೇ..
ನನ್ನ ಸಂತೋಷವನ್ನು ನೋಡಿ
ಅಸೂಯೇ ಆಗುವಂತೆ

ನೀ ಎಂದರೇನೇ,
ನನಗೆ ಒಂದು ರೀತಿಯ ತಂಪು
ಬೇಸಿಗೆಕಾಲದಲ್ಲಿ ಸುರಿವ ಮಳೆ
ಸುಡುವ ಮನಸ್ಸನ್ನಷ್ಟೇ ಅಲ್ಲಾ
ಸುಡುವ ಆತ್ಮವನ್ನು
ತಂಪಾಗಿಸುವಂತೆ

ನೀ ಎಂದರೇನೇ,
ನನ್ನ ಮುಂದಿರುವ ಕನ್ನಡಿಯಂತೆ,
"ನೋಡು, ನೀ ಹೇಗಿರುವೆ,
ಇನ್ನಷ್ಟು ಸುಂದರಿಯಾಗು" ಎಂದು
ನನಗೆ ಸಲಹೆ ನೀಡುವಂತೆ

ನೀ ಎಂದರೆ ಅದು ನೀನೇ..
"ಬೇರೆಯವರನ್ನೇಲ್ಲಾ ಬಿಟ್ಟು,
ಕೇವಲ ನನ್ನೋಬ್ಬನ್ನನ್ನೇ
ನೋಡುತ ಧ್ಯಾನಿಸುತ್ತಾ ಇರು"
ಎಂದು ನನಗೆ ನೀನು
ವರವನ್ನು ಕೊಟ್ಟಂತೆ


-ಪವನ್...

- pavanganu

18 Jun 2020, 04:00 pm
Download App from Playstore: