ಪ್ರೇಮವದು...

ಪ್ರೇಮವದು ...
ಮಳೆಯಲಿ ನೆನೆದು ಮನದಲ್ಲೂ ನೆನೆದು
ಮನಸು ನಸುನಗುತ ಅವನ ಹೆಸರ ಕರೆವಾಗ

ಪ್ರೇಮವದು...
ದೂರದೂರ ಹೋದಂತೆ ಅವನು
ಮನಸು ಆ ಮೊಗವ ಮನನ ಮಾಡುವಾಗ

ಪ್ರೇಮವದು...
ಅವನ ಒಂದೊಂದು ಕರೆಯ ಕಾಯುವಿಕೆಯಲ್ಲೂ
ದಿನಾ ಆ ಧ್ವನಿಯನೇ ಕನವರಿಸುವಾಗ

ಪ್ರೇಮವದು...
ಕಷ್ಟವೊ ಸುಖವೊ ಅವನ ಸಾನಿಧ್ಯವೇ
ಜೀವನದ ಖುಷಿ ಎನಿಸಿದಾಗ

- dvja

18 Jun 2020, 08:50 pm
Download App from Playstore: