ಪ್ರೇಮವೃಕ್ಷದಡಿ

ಒಲವಿನ ಹಾದಿಲಿ ಮಿಟಿದೆ
ಅನುರಾಗದ ನವ ಪಲ್ಲವಿ

ಮೊದಲ ನೋಟಕ್ಕೆ
ಸಂಭ್ರಮದ ಕುಣಿತ
ಕಂಡೆವು ನಮ್ಮಲ್ಲಿ

ರವಿಯ ಕಿರಣಕ್ಕೆ ಮಂಜಿನ ಹನಿಯು ಕರಗುತ್ತಿದೆ
ಚಲವ ಮೊಗಕ್ಕೆ ನನ್ನೆದೆ ಹಾಡುತ್ತಿದೆ ಕೇಳು

ಸಹ್ಯಾದ್ರಿ ಸಾಲುಗಳಿಂದು ಮೋಡಗಳಿಗೆ ಚುಂಬಿಸುತ್ತಿದೆ ನೋಡು
ನಿನ್ನೆದೆಯ ಹೂವಿಗಿಂದು ನಾ ದುಂಬಿಯಾಗಿ ಬಂದು
ನಿನ್ನ ತುಟಿಗಳ ಮೇಲೆ ನನ್ನ ಹೆಸರ ಬರೆಯುವ ಆಸೆ

ಆಕಾಶದಲ್ಲಿಗ ಕಾಮಣ ಬಿಲ್ಲು ಮೂಡಿದೆ
ಮೊದಲನೆ ಬಿಸಿಲು ಮಳೆಗೆ ಪ್ರೇಮದ ಕಲರವ
ಕೇಳು ಬಾ ಪ್ರೇಮವೃಕ್ಷದಡಿ

ಒಲವಿನ ಉಸಿರಿನ ಗಾಳಿಗಿಂದು
ಮೈ ಮನವ ಮರೆತು ಹಾಡುವ
ಇದು ನಮ್ಮ ಒಲವಿನಗೀತೆಯಾಗಿದೆ

ಮಾವಿನ ತೋಟದಲ್ಲಿ ಕೋಗಿಲೆ ಸ್ವರವ
ಮಲ್ಲಿಗೆ ವನದಲ್ಲಿ ಪರಿಮಳವ
ನಮ್ಮ ಪ್ರೀತಿಯ ಹಿತವ
ಬಂಧಿಸಲು ಸಾಧ್ಯವಿಲ್ಲ
ನೀ.. ಚಿಂತಿಸದಿರು

- ದ್ಯಾವನೂರು ಮಂಜುನಾಥ್

- ದ್ಯಾವನೂರು ಮಂಜುನಾಥ್

25 Jun 2016, 07:15 am
Download App from Playstore: