ದೇಹ ಆತ್ಮದ ನಂಟು

ಅವಿನಾಭಾವ ಸಂಬಂಧ
ಆತ್ಮಕ್ಕೂ ಅನಿಲಕ್ಕೂ
ಕೈಗಳಿಗೂ ನಿಲುಕದೇ
ಕಣ್ಣುಗಳಿಗೂ ಕಾಣಿಸದು
ಮೈಮನಕಷ್ಟೇ ಸೀಮಿತ
ಪ್ರೀತಿಯೋ ಅನಿವಾರ್ಯವೋ
ಶರೀರವು ಆತ್ಮದ ನಂಟು
ಧರಣಿಯು ದೇಹದ ಬೆಸುಗೆ
ಶರೀರ ರಹಿತ ಆತ್ಮವು
ವಾಯುವಲ್ಲಿ‌ ಲೀನವು
ಜೀವ ರಹಿತ ದೇಹವು
ಧರಿತ್ರಿಲೀ ವಿಲೀನವಯ್ಯ....!

- Yashaswi Gowda

19 Jun 2020, 10:43 pm
Download App from Playstore: