ನಮ್ಮ ಸಮಾಜದಲ್ಲಿ..

ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ಅವರ ಕನಸುಗಳು ಕಣ್ಣಲ್ಲೇ ಉಳಿದು ಕಣ್ಣೀರಾಗಿ ಹೋಗಬೇಕೆ ಹೊರೆತು ನನಸಾಗಿ ಆಗಸದಲ್ಲಿ ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಲು ಯಾವ ತಂದೆ ತಾಯಿಯೂ ಬಿಡುವುದಿಲ್ಲ ಕಾರಣ ಸಮಾಜ, ವಯಸ್ಸು, ಆರ್ಥಿಕ ಬಿಕ್ಕಟ್ಟು, ಬಂಧುಗಳು ಮತ್ತು ಸ್ನೇಹಿತರು.

ಈ ಮಧ್ಯಮ ವರ್ಗದ ಜನರಿಗೆ ತಮ್ಮ ನೋವು ನಲಿವುಗಳಿಗಿಂತ ಸಮಾಜದಲ್ಲಿ ತಮ್ಮ ಗೌರವ ಮರ್ಯಾದೆ ಹೆಚ್ಚು ತಮ್ಮ ಮಕ್ಕಳ ಆಸೆ ಕನಸುಗಳಿಗಿಂತ ಇತರರ ಬಾಯಲ್ಲಿ ಒಂದು ಮಾತು ಕೇಳದೆ ಬದುಕಿಬಿಟ್ಟರೆ ಸಾಕು ಜೀವನ ಧನ್ಯ.
ಅದರಲ್ಲೂ ಹೆಣ್ಣು ಎಂದರೆ ಋಣಾತ್ಮಕ ಗಂಡು ಎಂದರೆ ಧನಾತ್ಮಕ ಭಾವನೆ ಇವರಲ್ಲಿ ಹೆಣ್ಣನ್ನು ಹೆಚ್ಚಿಗೆ ಓಡಿಸಿದರೆ ನಮಗೇನು ಸಿಗುತ್ತದೆ ಅವಳ ಅತ್ತೆ ಮನೆಯವರಿಗೆ ದುಡಿದು ಹಾಕುತ್ತಾಳೆ ಹೋಗುವುದು ನಮ್ಮ ದುಡ್ಡು ಅದೇ ಮಗನನ್ನು ಓದಿಸಿದರೆ ಜೀವನ ಪೂರ್ತಿ ನಮಗೆ ಉಳಿಯುತ್ತದೆ ಎನ್ನುವ ಆಲೋಚನೆಯೇ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ನಿಲ್ಲಿಸಲು ಮೊದಲ ಕಾರಣ.

ನೀವು ಹೇಳಿದಂತೆ ಅತ್ಯಾಚಾರ ಅನಾಹುತಗಳು ಬರಿ ಹೆಣ್ಣಿಗೆ ಸೀಮಿತ ಮಾಡಿರುವುದು ನಮ್ಮ ಸಮಾಜವೇ ಅಲ್ಲವೇ ಅದೇ ಸಮಾಜ ಒಂದೆಜ್ಜೆ ಮುಂದಾಕಿ ಇವನ್ನೆಲ್ಲಾ ನಿಲ್ಲಿಸಲು ಪ್ರಯತ್ನ ಮಾಡಿದರೆ ನಿಲ್ಲುವುದಿಲ್ಲವೇ?
ಪುರುಷ ಪ್ರಧಾನ ಪ್ರಪಂಚದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದು ನನ್ನ ನಂಬಿಕೆ ಏಕೆಂತದರೆ ತನಗೆ ಆದದ್ದು ತನ್ನ ಮಗಳಿಗೆ ಆಗಬಾರದೆಂದು ಅವಳು ಸ್ವತಂತ್ರಳಾಗಬೇಕೆಂದು ಒಂದು ತಾಯಿ ಅಂದುಕೊಳ್ಳದ ಹೊರೆತು ಯಾವ ಹೆಣ್ಣು ಸ್ವತಂತ್ರಳಲ್ಲ.

- ಚುಕ್ಕಿ

20 Jun 2020, 11:13 am
Download App from Playstore: