ಮಗಳಿಗೆ ಜನುಮದಿನದ ಶುಭಾಶಯಗಳು

ಪ್ರಥಮ ಅಳುವಿನ ನಿನ್ನ ಆ ದಿನ
ಎನ್ನ ಜೀವನದ ಸುವರ್ಣ ದಿನ
ತೊದಲು ಮಾತು ಅಂಬೆಗಾಲಿಡುತ್ತಾ
ನೀ ಬೆಳೆದೆ ಎನ್ನಲ್ಲಿ ಹೊಸ ಹುರುಪು ತುಂಬುತ್ತಾ
ನಿನ್ನ ಆಟ ತುಂಟಾಟಗಳ ನೋಡುತ್ತಾ
ಮರೆತೆ ನಾನು ದುಃಖ ದುಮ್ಮಾನಗಳ
ದೀಪಾವಳಿ ಇರಲಿ ಯುಗಾದಿಯೇ ಬರಲಿ
ಎಲ್ಲಕ್ಕಿಂತ ಮಿಗಿಲು ನನಗೆ ಈ ದಿನ
ಸೂರ್ಯಚಂದ್ರರ ಮರೆಮಾಚಿ
ಎನ್ನ ಮನದ ಮನೆಯ ಬೆಳಕಾದೆ ನೀ
ಎಷ್ಟು ಕೊಂಡಾಡಿದರು ಮುದ್ದಾಡಿದರು
ಸಾಲದು ಓ ಎನ್ನ ಮುದ್ದು ಮಗಳೇ
ಇದೋ ನಿನಗೆ ಜನುಮದಿನದ ಶುಭಾಶಯಗಳು
ಬಾಳು ನೀನು ನೂರಾರು ವರ್ಷ
ನಕ್ಕು ನಲಿಯುತ ಪ್ರೀತಿಯ ಹಂಚುತ

- santhoshkumar

21 Jun 2020, 08:50 am
Download App from Playstore: