ನಡೆಸುವ ಕೈ ಅಪ್ಪನದು..
ನಾವು ಮಗುವಾಗಿ ಅತ್ತಗ..
ಲಾಲಿ ಹಾಡಿ ಮಲಗಿಸುವ ಕೈ ಅಮ್ಮದಾದರೆ.
ನಮ್ಮನ್ನು ನಗಿಸಲು ಶ್ರಮ ಪಟ್ಟು ಖುಷಿ ಪಡುವ ಕೈ ಅಪ್ಪನದು.
ನಾವು ನಡೆಯುವುದ ಕಲಿವಾಗ..
ನಮ್ಮ ಕೈ ಹಿಡಿದು ನಡೆಸುವ ಕೈ ಅಮ್ಮದಾದರೆ.
ನಮ್ಮ ಕೈ ಬಿಟ್ಟು ನಡೆಸುವ ಕೈ ಅಪ್ಪನದು.
ನಾವು ತಪ್ಪು ಮಾಡಿ ಅತ್ತಗ..
ಬುದ್ದಿ ಹೇಳಿ ಕಣ್ಣು ವರೆಸುವ ಕೈ ಅಮ್ಮದಾದರೆ.
ಒಡೆದು ಸರಿ ದಾರಿ ತೋರಿಸುವ ಕೈ ಅಪ್ಪನದು.
ಮಮತೆಯ ಜವಾಬ್ಧಾರಿ..
ಪ್ರೀತಿ ಮಮತೆಯ ಕಣ್ಣಂಚಿನ ಕೈ ಅಮ್ಮದಾದರೆ.
ಮಮತೆಯ ಜೊತೆಗೆ ಜವಾಬ್ಧಾರಿ ಒತ್ತ ಕೈ ಅಪ್ಪನದು.
ನಾವು ಗೆದಾಗ..
ಖುಷಿ ಪಟ್ಟು ಸಿಹಿ ಮಾಡಿ ಹಂಚುವ ಕೈ ಅಮ್ಮದಾದರೆ.
ಮನಸ್ಸಲ್ಲೇ ಸಂಭ್ರಮಪಟ್ಟು ಕಣ್ಣೀರು ಸುರಿಸುವ ಕೈ ಅಪ್ಪನದು.
ಜೀವನದಲ್ಲಿ ತೆರೆಯ ಇಂದೇಯೇ ಇದ್ದು ನಮ್ಮನು ಜೀವನದ ತೆರೆಯ ಮೇಲೆ ಮಿಂಚುವ ಹಾಗೆ ಮಾಡುವ ಏಕೈಕ ಕೈ ಅಪ್ಪನದು.....
- NaveenkumarK
21 Jun 2020, 12:05 pm
Download App from Playstore: