ಅವಳೆ ಸ್ಪೂರ್ತಿ

ಮನವೆಂಬ ದೇಗುಲದಿ ಸುಂದರ ಮೂರ್ತಿ ನೀನು
ನಿನ್ನನ್ನೆ ಪೂಜಿಸುವ ಪ್ರೀತಿ ದಾಸ ನಾನು
ನಮ್ಮಿಬ್ಬರ ಜೀವನ ಹಾಲು ಜೇನು
ದುಃಖದ ಕಹಿಯು ನನಗಿರಲಿ ಸುಖದ ಸವಿಯು ನಿನಗಿರಲಿ ನಿನೆಂದು ಆಗಿರು ಜೇನಿನ ಹನಿ...

ಜೀವನದ ಈ ಪಯಣವು ಹೂ ಮುಳ್ಳುಗಳ ತೋಟ
ಇದರಲ್ಲಿ ಸುರಕ್ಷಿತವಾಗಲು ಅವಶ್ಯ ನಿನ್ನ ತೀಕ್ಷ್ಣವಾದ ನೋಟ
ಆಡದಿರು ಬದುಕಿನಲಿ ಚೆಲ್ಲಾಟ ನಿನಗೆ ಬರದಿರಲಿ ಯಾವುದೆ ಸಂಕಟ
ಜಂಜಾಟವಿಲ್ಲದೆ ಉಲ್ಲಾಸದಿಂದಿರು ನನ್ನ ಉಯಸಿರಿನ ಮರ್ಕಟ

ಮಾಯಾವಿ ಬರುವಳು ಕದ್ದೂಯಲು ನಮ್ಮ ನಗುವ
ಅವಳಿಗೆ ಕಲಿಸು ನೀ ಒಳ್ಳೆಯ ಪಾಠವ
ಹೆದರಿ ಓಡಬೇಕು ಅವಳು ನೋಡಿ ನಮ್ಮ ಧೈರ್ಯವ
ನಮ್ಮೊಲವೆ ನಮ್ಮ ಗೆಲುವಿನ ಕಾರಣ ಇದುವೆ ಸಂಸಾರದ ಹೊಂಗಿರಣ

- RoopaGowtham

27 Jun 2020, 10:20 am
Download App from Playstore: