ವಿರಹಿ ರಾಧೆ

ಎಲ್ಲಿಗೆ ನೀನು ಹೋದೆ
ಕಾದಿಹಳು ನಿನ್ನ ರಾಧೆ
ಕತ್ತಲೆಯೊಳು ಕುಳಿತು
ನಿನ್ನ ಪ್ರೀತಿಯ ಬೆಳಕಿಗೆ
ಎಲ್ಲಿಗೆ ನೀನು ಹೋದೆ
ದಾರಿ ಕಾದಿಹಳು ನಿನ್ನ ರಾಧೆ

ಮೌನದ ರಾಗವು
ಪದ ಸಿಗದೆ ನರಳಿದೆ
ಮಾತಿನಲ್ಲಿ ಹೇಳದ ಪದವೀಗ
ಕಣ್ಣೀರಾಗಿ ಜಾರಿದೆ
ಎಲ್ಲಿಗೆ ನೀನು ಹೋದೆ
ದಾರಿ ಕಾದಿಹಳು ನಿನ್ನ ರಾಧೆ

ನಿನ್ನ ಕೊಳಲ ದನಿಯನು
ಕೇಳದೆ ಪರಿತಪಿಸಿದೆ
ನಿನ್ನ ಮೊಗವನು
ನೋಡಲು ಬಯಸಿದೆ
ಎಲ್ಲಿಗೆ ನೀನು ಹೋದೆ
ದಾರಿ ಕಾದಿಹಳು ನಿನ್ನ ರಾಧೆ

ಅನುಕ್ಷಣ ನನ್ನ ಮನವು
ನಿನ್ನನೇ ಅನುಸರಿಸಿದೆ
ಕಠಿಣ ವಿರಹದಲೂ
ನಿನ್ನ ಪ್ರೀತಿಯೇ ಉಪಚರಿಸಿದೆ
ಎಲ್ಲಿಗೆ ನೀನು ಹೋದೆ
ದಾರಿ ಕಾದಿಹಳು ನಿನ್ನ ರಾಧೆ
        
✍️ ಜನಾರ್ದನ ಗೊರ್ಟೆ

- Janardana Gorte

27 Jun 2020, 12:15 pm
Download App from Playstore: