ಮಾಯಾಮೃಗ
ಕಣ್ಣಿಗೆ ಕಾಣದ ಮಾಯಾಮೃಗ
ತಣಿಸಿದೆ ನನ್ನ ಮನದೂಡಲ
ಮನಸ್ಸನಲ್ಲೀಗ ಹಾಲಾಹಲ
ಓ ನನ್ನ ಮಾಯಾಮೃಗ ಬಾ ಸೇರು ನನ್ನೂಡಲ..
ಪ್ರಕೃತಿಗಿಲ್ಲ ಯಾವ ಚೆಲುವಿನ ಸರಿಸಾಟಿ
ನಿನ್ನ ಪ್ರೀತಿಗೆ ಯಾರು ನೀಡಬಲ್ಲರು ಪೈಪೋಟಿ
ಎಲ್ಲರೊಂದಿಗೆ ತರಲೆ ಮಾಡುವ ನೀನು ತುಂಟಿ
ನಿನ್ನ ನೋಡಿ ನನಗನಿಸಿದೆ ಆಗಬೇಕೆಂದು ನಿನ್ನ ಜಂಟಿ....
ಸಂಸಾರದ ಸಾಗರದಲ್ಲಿ ಈಜುತಿರುವ ಮನುಜ
ತೇಲು ಮುಳುಗುಗಳು ಸಾಗರದ ಅಲೆಯಂತೆ ಜೀವನದಲ್ಲು ಸಹಜ
ಎಲ್ಲವನ್ನು ಬಂದಂತೆ ಸ್ವೀಕರಿಸಿದರೆ ಸಿಗುವುದು ಸಂಬಂಧ ಖಚಿತ
ಮನ ಬಂದಂತೆ ನಡೆಯಲು ಅನುಚಿತವಾದರೆ ಮುಳ್ಳಿನಂತ ಚುಚ್ಚುಮಾತು ಉಚಿತ...
- RoopaGowtham
29 Jun 2020, 04:50 pm
Download App from Playstore: