ಸರಳ ಬದುಕು...

ಲತೆಗಳ ನಡುವೆ ಅಂಕುರ ಮೂಡಲು
ಪರಿತಪಿಸಿತು ಕಣ್ಗಳ ತೆರೆಯಲು|
ಕಿಂಚಿತ್ತು ಸಮಯ ರಾತ್ರಿಯ ಕಳೆಯಲು
ಯೋಜನೆಯ ಹೂಡಿತು ಭವಿಷ್ಯವ ರಚಿಸಲು||

ಭೂಮಿಗೆ ತಲುಪಲು ಸೂರ್ಯನ ಕಿರಣವು
ಶೀಘ್ರದಿ ತಾಗಿತು ಹುರುಪಿನ ಸ್ಪರ್ಶವು|
ದಳಗಳ ತೆರೆಯುತ ಅರಳಿತು ಪುಷ್ಪವು
ವಿಸ್ಮಯವೆನಿಸಿತು ಸೃಜನಾತ್ಮಕ ಲೋಕವು||

ಕಂಪನು ಬೀರಿತು ಪತಂಗವ ಸೆಳೆಯಲು
ಸೌಂದರ್ಯವ ತೋರಿತು ಗುರುತಿಸಿಕೊಳ್ಳಲು|
ಸಜ್ಜಾಗಿ ನಿಂತಿತು ಹೂಮಾಲೆಯಾಗಲು
ಹರುಷದಿ ತೇಲಿತು ಶ್ರೀ ಚರಣವ ಸೇರಲು||

- AnanyaHegde

01 Jul 2020, 11:57 pm
Download App from Playstore: