ಸುಂದರ ಮಸ್ಸಂಜೆ..

ಕಾಲದ ಹಿಂದೆ ಓಡಿತು ಮುಗಿಲು
ಸುಂದರ ಮುಸ್ಸಂಜೆ ವೇಳೆಯಲಿ|
ಅಲೆಗಳ ಚೆಲ್ಲುತ ಸ್ಪಂದಿಸಿತು ಕಡಲು
ಇಂತಹ ಗೋಧೂಳಿಯ ಸಮಯದಲಿ||

ಹಕ್ಕಿಯು ಹಾರಿತು ಗೂಡಿನ ಬಳಿಯೇ
ಒಲವಿನ ಗುಟುಕನು ನೀಡಲು|
ಕೋಗಿಲೆ ಬೆರೆಸಿತು ಇಂಪಾದ ಧ್ವನಿಯ
ಮನುಜರ ಒತ್ತಡ ತಣಿಸಲು||

ಹರಡಿತು ಸುತ್ತಲು ದೀಪದ ಕಾಂತಿ
ಅಷ್ಟಲಕ್ಷ್ಮಿಯರ ಬರಮಾಡಲು|
ಉಳಿಯಿತು ಸಂಸ್ಕೃತಿ, ನೆಲೆಸಿತು ಶಾಂತಿ
ಭಾರತೀಯರ ರಕ್ಷಣೆ ಮಾಡಲು||

- AnanyaHegde

03 Jul 2020, 05:36 pm
Download App from Playstore: