ಎದೆಯ ಕದವ ತಟ್ಟಿ
ಎದೆಯ ಕದವ ತಟ್ಟಿ
ನೋವು ನಲಿವುಗಳ ಮೀಟಿ
ಹೋದದ್ಯಾಕೆ ಬಾಳ ಕಡಲ ದಾಟಿ
ಹೇಳ್ಯಾರಿಲ್ಲಿ ಜಗದಲಿ ನಿನಗೆ ಸಾಟಿ
ಕಳೆದು ಹೋದ ಸವಿ ಘಳಿಗೆಗಳು
ಯಾವ ಸರ್ಪ ಕಕ್ಕಿದ ಉಗುಳು
ನೆನಪಲಿ ಸೋಲುತಿವೆ ನರನಾಡಿಗಳು
ನಿನ್ನೀರಿಕ್ಷೆಯೇ ಜೀವಕೀಗ ನೆರಳು
ನಿನ್ನೊಲವಿರದ ನಾ ಏಕಾಂಗಿ
ಬಂದು ಬಿಡು ಒಮ್ಮೆ ತಿರುಗಿ
ಕಳೆದೋಗುತ್ತಿರುವೆ ಕತ್ತಲೊಳಗೆ ಕರಗಿ
ನಿನ್ನ ನೆನೆ ನೆನೆದು ಮರುಗಿ
ತಲೆಯಿರಿಸಿ ಮಡಿಲೊಳಗೆ ಅತ್ತು
ತುಂಬುವೆ ಬೊಗಸೆ ತುಂಬಾ ಮುತ್ತು
ಕಷ್ಟಸುಖವೋ ಹಂಚಿ ತಿಂದು ಕೈತುತ್ತು
ಬಾಳ ಗಂಧ ಸವೆಸುವ ನಗುವ ಹೊತ್ತು
- ಶ್ರೀಕಾವ್ಯ
11 Jul 2020, 07:11 pm
Download App from Playstore: