ಬಾನಂಗಯ
ಬಾನಂಗಳು
ಬಾನಲ್ಲಿ ಹಾರುವ ಬಾನಾಲಿಗಳೆ
ಬನ್ನಿರಿ ನಮ್ಮಯ ಅಂಗಳಕೆ
ನೀಡುವೆ ನಿಮಗೆ ಸಿರಿದಾನ್ಯೆಗಳನು
ತೋರಿಸಿ ನಿಮ್ಮ ನೃತ್ಯವ ನಮಗೆ
ಪುಟ್ಟ ಕಂದಮ್ಮಗಳ ಕಾದಿವೆ ನಿಮಗಾಗಿ
ಬನ್ನಿ ಮುದ್ದಿಸಿ ಮುದನೀಡಿ ಅವರಿಗೆ
ಅವರು ಹಾಡಿಕುಣಿವರು ನಿಮ್ಮೊಟ್ಟಿಗೆ
ಎಲ್ಲರು ಮೈ ಮರೆಯಿರಿ ಒಟ್ಟೂಟ್ಟಿಗೆ
ನಿಮಗಾಗಿ ಮಾಡಿದೆ ಪುಟ್ಟ ಗೂಡೂಂದನ್ನು
ಇಣುಕಿ ನೋಡು ಅದರಲ್ಲಿ ಇದೆ ಸಿಹಿಜೇನು
ನಿನಗಿಷ್ಟವಾದರೆ ಸವಿ ಇರು ಬೆಚ್ಚಗೆ ಅಲ್ಲಿಯೇ
ಮಾಡಿದೆ ಇದನೆಲ್ಲವ ನಿನಗಾಗಿಯೇ
ಬಾ ನನ್ನ ಪುಟ್ಟ ಹಕ್ಕಿ ಮುದ್ದು ಪಕ್ಕಿ
ನನಗು ಕೊಡು ನಿನ್ನ ರೆಕ್ಕೆ
ನಾ ಬರುವೆ ನಿನ್ನ ಜೊತೆ ಹಾರಲಿಕ್ಕೆ
ಕರೆದೊಯ್ಯು ನನ್ನನ್ನು ಬಾನಂಗಗಳಕೆ
- RoopaGowtham
12 Jul 2020, 10:24 am
Download App from Playstore: