ಓ ಮನವೇ...

ಓ ಮನವೇ,
ನೀ ಮೌನಿ ಯಾಕಿಂದು?
ವ್ಯಥೆ ಕಾಡುತಿದೆಯೋ,
ನಿನಗೆ ನೋವಾಗಿದೆಯೋ?
ನನಗಂತೂ ಅರಿಯಲಾಗುತ್ತಿಲ್ಲವೇ..
ನಿನ್ನ ಭಾವಗಳೆಲ್ಲಾ ಮರೆಯಾಗಿಹುದೋ,
ಅಲ್ಲ ಮುನಿದುಕೊಂಡಿವೆಯೋ?
ನನಗೊಂದೂ ಅರ್ಥೈಸಲಾಗುತ್ತಿಲ್ಲವೇ..
ಅರೆ! ಕಂಬನಿಯೇಕೆ ಹನಿಯಲು
ಈ ಪರಿ ರೋಧಿಸುತಿಹುದು
ಯಾಕೆಂದು ತಿಳಿಯಲಾಗುತ್ತಿಲ್ಲವೇ..
ನನಗೋದಲಾಗದ ನಿನ್ನ
ಅಕ್ಷಿಗಳರಿತುಕೊಂಡವೇ
ಇದು ನ್ಯಾಯವೇ ಮನವೇ?
ಇದು ನ್ಯಾಯವೇ?
ಇದೇನು ಸುರಿಯುತಿರುವವಲ್ಲ
ಈ ಸಮನೆ 'ಸೋ' ಎಂದು
ಮೋಡಗಳು ಮುರಿದು-ಹರಿದು
ನಾ ಮಾತ್ರ ಪರನಾದೆನಾ ನಿನಗೆ
ನಾ ಮಾತ್ರ ಪರನಾದೆನಾ ನಿನಗೆ?
ಎನಗಿಲ್ಲವೇ ಹಕ್ಕು-ಹೊಣೆಗಾರಿಕೆ ನಿನ್ನದು
ಮುರಿಯೇ ಮೌನವ ಮನವೇ
ಹಂಚು ಭಾವಗಳ ಮನವೇ
ಮುರಿಯೇ ಮೌನವ ಓ ನನ್ನ ಮನವೇ ...

- ಅರ್ಪಣ್

28 Jun 2016, 11:30 am
Download App from Playstore: