ಸತ್ಯದ ಬೀಜ ಬಿತ್ತು
ಸತ್ಯದ ಬೀಜ ಬಿತ್ತು
ಕಲಿಯಬೇಕು ಕಲಿಸಬೇಕು
ಮಗುವಿಗೊಂದು ಒಳಿತನ್ನು
ಬುದ್ಧಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ
ಧಮ್ಮಂ ಶರಣಂ ಗಚ್ಛಾಮಿ !!
ಜ್ಞಾನಿಗಳ ಮಾರ್ಗದಲ್ಲಿ
ನೀತ ಸತ್ಯ ಹಾದಿಯಲ್ಲಿ
ನೋವು ನಲೀವು ಕಂಡವರಲ್ಲಿ
ಪ್ರೀತಿ ಮಮತೆ ಬಿತ್ತುವರಲ್ಲಿ ಕಲಿಸಬೇಕಣ್ಣ!!
ನಿನ್ನೆ ಮೊನ್ನೆ ಮಾತುಗಳಲ್ಲ
ಬರೆವ ನೀತಿ ವೇದಗಳಲ್ಲ
ಕಾಲ ತಿಳಿದು ಬದುಕುವುದಲ್ಲ
ಲೋಕಜ್ಞಾನ ತಿಳಿಸಿದರಲ್ಲ ಕೇಳಣ್ಣ !!
ತಾನು ಅರಿತ ನೋವನು ಕುರಿತು
ಜ್ಞಾನೋದಯದ ಮಾರ್ಗವ ಕಂಡ
ಹುಟ್ಟು ಸಾವು ಸೃಷ್ಟಿಯ ಕಂಡ
ಮನುಕುಲದ ಸಂಕಟ ಅರಿತವ ಕೇಳಣ್ಣ!!
ಬುದ್ಧನಾಮ ಚೆರಿತ್ರೆಯು
ಸತ್ಯ ಮಾರ್ಗ ನಡೆನುಡಿಯು
ಹೊಸ ಯುಗವ ಕಟ್ಟುವ ಬುದ್ಧ
ಸತ್ಯ ಶಾಂತಿ ಸಹನೆ ತಾಳ್ಮೆ ಕಲಿಸಬೇಕಣ್ಣ!!
ಜಿ ಟಿ ಆರ್ ದುರ್ಗ
ಬಂಗಾರಪೇಟೆ
- Gtramachandrappa Ramachandrappa
20 Jul 2020, 10:57 am
Download App from Playstore: