ಗಜಲ್..
ಕುಸುಮಕಿದೆ ಇರುಳಿನಲಿ ಉರುಳು ಜೋಕೆ
ಆಸೆಯ ಭೃಂಗದ ಬೆನ್ನೇರುವ ಇಂಗಿತವೇಕೆ?
ಕಣ್ತುಂಬಿದ ಚಂದ್ರಚಾಪ ಗಗನ ತೋರಿ ಮಾಸಿತು
ಕನಸ ಶೃಂಗಕೆ ಏಣಿ ಹಾಕಿ ನಲುಗುವುದೇಕೆ?
ಜೀನಿಲ್ಲದ ಕುದುರೆಯೇರಿ ಊರ ಸೇರಿದವನುಂಟೆ
ಆಸೆಯಲೆಗೆ ಹುಟ್ಟಾಕದೆ ತೀರ ಸೇರೀತೆ ಬಾಳನೌಕೆ?
ಮನದಿಡಿತಕೆ ಸಿಕ್ಕವನ ಬಾಳದಾರಿಯಲಿ ನಟ್ಟಿರುಳು
ಭವಬಂಧನದ ಕತ್ತಲಲಿ ಕುರುಡಾಗಿ ಪಯಣಿಸುವುದೇಕೆ?
ಬಿದ್ದ ಹನಿಯೆಲ್ಲ ಹಿಂಗಲಿಲ್ಲ ಭುವಿಯ ಒಡಲಲಿ
ಏತಕೆ ಕಂಡ ಕನಸಿಗೆಲ್ಲ ಮಡಿಲಾಸರೆಯ ಬಯಕೆ?
ಕುಂಬಳಕೇಕೆ ಬಳ್ಳಿ, ಮರದಲಿ ನೆಲ್ಲಿ ತೂಗಿತು
ಬಂದದ್ದೆಲ್ಲ ಇರಲಿ ಬಾಳಲಿ, ಬೇಕೆ ಹೋಲಿಕೆ?
ಹೂವು ಅರಳಿ ಜಗ ಕಾಣಲು ಮುಳ್ಳಿನ ಕಾವಲು
ಮನ ದಣಿದು ತಣಿದು ಕಾವ್ಯವಾಗದ ಬದುಕೇಕೆ?
- ಶ್ರೀಕಾವ್ಯ
01 Aug 2020, 07:03 am
Download App from Playstore: