ಹಾಗೆ ಪ್ರೀತಿಯೂ ಕೂಡ

..ಹಾಗೆ ಪ್ರೀತಿಯೂ ಕೂಡ..

ಆದಿ ಅಂತ್ಯ ಇಲ್ಲದ ನದಿಯಂತೆ
ಎಂದೂ ಅದು ಹುಟ್ಟಿಲ್ಲ
ಹುಟ್ಟಿಲ್ಲ ಅಂದ ಮೇಲೆ ಕೊನೆ ಇರಲು ಹೇಗೆ ಆದೀತು,
ಹರಿಯುತಿದೆ ನದಿ ನೀರು
ಹಾಗೆ ಪ್ರೀತಿಯೂ ಕೂಡ......

ಹಿಡಿದು ನಿಲ್ಲಿಸಕ್ಕಾಗದ ಸಮಯದಂತೆ
ಎಂದೂ ಅದು ಜಡವಾಗಿಲ್ಲ
ಜಡವಾಗಿಲ್ಲ ಅಂದ ಮೇಲೆ ಹಿಡಿದಿರಲು ಹೇಗೆ ಸಾಧ್ಯ ಆದೀತು,
ಬದಲಾಗುತ್ತಿದೆ ಸದಾ ದೇಹ
ಹಾಗೆ ಪ್ರೀತಿಯೂ ಕೂಡ...

ಎಲ್ಲಾ ಇದ್ದು ಏನೂ ಇಲ್ಲದ ಬಯಲಿನಂತೆ
ಎಂದೂ ಅದು ತುಂಬಿಕೊಳ್ಳಲಿಲ್ಲ
ತುಂಬಿಕೊಂಡಿಲ್ಲ ಅಂದ ಮೇಲೆ ಬರಿದಾಗಲೂ ಹೇಗೆ ಸಾಧ್ಯ ಆದೀತು,
ಅದು ಶೂನ್ಯತೆ
ಹಾಗೆ ಪ್ರೀತಿಯೂ ಕೂಡ....

ಕೂಡಿಸಿ ಕಳೆಸಿದ ಗುರುವಿನಂತೆ
ಅದು ಎಂದೂ ಕೂಡಲಿಲ್ಲ
ಕೂಡಲಿಲ್ಲ ಅಂದ ಮೇಲೆ ಕಳೆಯಲು ಹೇಗೆ ಸಾಧ್ಯ ಆದೀತು,
ಅದು ಸೊನ್ನೆ
ಹಾಗೆ ಪ್ರೀತಿಯೂ ಕೂಡ...

-..ಪ್ರವೀಣಸಿಂಗೋನಹಳ್ಳಿ..

- praveens singonahalli

01 Aug 2020, 12:17 pm
Download App from Playstore: