ಅಸೂಯೆ

ಪರರ ಸುಖ ನೋಡಲಾಗುವುದಿಲ್ಲ..
ತನ್ನ ಸಂತೋಷ ಹಂಚಲಾಗೋದಿಲ್ಲ..
ಇನ್ನೊಬ್ಬರ ಕೆಡುಕಿನೆಡೆಗೆ ಇವರ ಪಯಣ..
ಮನದಲ್ಲಿ ಯಾವಾಗಲೂ ಬೇಡದ ಚಿಂತೆ..
ಕೊಡಲು ಮನಸಾಗದು..
ಕೊಟ್ಟರೆ ಅವರ ಆಳಾಗಬೇಕೆಂಬ ದುರಾಸೆ.‌.
ತಾನೇ ಎಲ್ಲಾ ತನ್ನಿಂದಲೇ ಎಲ್ಲಾ ಎಂಬ ಅಹಂಕಾರ..
ಇನ್ನೊಬ್ಬರ ಕಂಡು ಹಾಸ್ಯವಾಡೊ ಮಾತುಗಳು..
ಮನದ‌ ತುಂಬಾ ಕಲ್ಮಷ..
ಬೇರೆಯವರ ಮಾತ ಕೇಳಲಾಗದು..
ತನ್ನನ್ನೇ ಎಲ್ಲರೂ ಗುರುತಿಸಬೇಕೆಂಬ ಕೆಟ್ಟ ಹಠ..
ಇದೆಲ್ಲಾ ತನ್ನ ಪಾಪದ ಕೊಡ ತುಂಬುವ ತನಕ..
ನಂತರ ಎಲ್ಲನೂ ದೇವರಿಚ್ಛೆ..
ಇವಾಗ ನಿನ್ನಿಚ್ಛ...
@ಮೇಘ ಗಣೇಶ್

- Megha s

02 Aug 2020, 03:31 pm
Download App from Playstore: