ಬದುಕು ಎಂಬ ಜಟಕಾ ಬಂಡಿ

ಬದುಕು ಎಂಬ ಜಟಕಾ ಬಂಡಿ

ಗುರಿಯಿಲ್ಲದ ಕಡೆಗೆ ಓಡುತ್ತಿದೆ

ಕಲ್ಲು ಮುಳ್ಳು ಒಂದೂ ನೋಡದೆ

ಮನಸಾ ಇಚ್ಛೆ ಓಡುತ್ತಿದೆ

ತನ್ನ ತನವ ಮರೆತು ಓಡುತ್ತಿದೆ


ಬೇಡದ ಕನಸನ್ನ ಕಂಡು

ತನ್ನ ಕನಸನ್ನು ಕಸವಾಗಿ ಕಂಡು

ಕಾಣದ ಆಸೆಯನ್ನುಂಡು

ಕರೆದಾಗ ಬರಲಾರದ ಮೊಂಡು

                              ಈ ಜೀವ


ಮೋಡದ ಎದೆಯನ್ನು ಹಿಂಡಿ

ಮಳೆಹನಿಯ ಕಸಿವಂತ ನೂರಾರು ದಂಡು

ಓಡುವ ಬೆಳಕನ್ನು ಹಿಡಿದು

ತನ್ನ ಕೊಳಕನ್ನು ತೊಳೆವಂತ ಹಿಂಡು

ಸಾವಿರ ಹೂಗಳ ಕಸಿದು

ತನ್ನ ಕೊರಳಿಗೆ ಹಗ್ಗವ ಒಸೆವ

                           ಈ ಜೀವ

- ಜಿ. ಪ್ರಕಾಶ್

09 Aug 2020, 03:18 am
Download App from Playstore: