ಮೂಕ ಕೋಗಿಲೆ

ಯಾವುದಾದರು ಕನಸಿನ ಕೂಪದೊಳಗೆ     
ಮುಳುಗಿಸೆನ್ನ ಮನಸನು, ದಾರಿ ಕಾಣದಾಗಲಿ 
ಮರಳಿ ತನ್ನೆದೆಯ ಸೇರಲು 

ಎತ್ತಣದೊಲವಿನೊಳಗೆ ಸತ್ತ ಮಸಣದ ಹೂಗಳು       
ಎಷ್ಟೇ ಅರಳಿ ನಕ್ಕರೂ ಗಂಧವ ಕಾರದಿರಲಿ 
ಮುಂಜಾವಿನ ನಸುಗಂಪಲಿ ಎದ್ದ ರವಿತೇಜನು     
ಮತ್ತೆಂದು ತನ್ನ ಕಿರಣವ ಬೀರದಿರಲಿ          ಕಪ್ಪು ಮೋಡದಲ್ಲಡಗಿರುವ ಮಳೆಯ ಹನಿಗಳು       
ಮತ್ತೆ ಭೂರಮೆಯ ಮೈಯ ಸೋಕದಿರಲಿ 
ಹಾಳು ಹುಣ್ಣಿಮೆಯ ಬೆಳಕಲಿ ಮನಸಿದು    ನೆನೆದು ನೆನೆದು ನಡುಗಿ ಕೊರಗಿದೆ              ಬಟ್ಟ ಬಯಲಿನಲಿ ಕುರುಡು ಹೃದಯವು    ತನ್ನ ಕಣ್ಗೆಜ್ಜೆಯ ಕಳಚಿ ಹೊರಟಿದೆ            ಕನಸು ಮನಸಿನ ಬೇಕು ಬೇಡದಮಲಿನಲಿ          ಮೂಕ ಕೋಗಿಲೆ ಹಾಡಿದೆ,                      ಮೂಕ ಕೋಗಿಲೆ ಹಾಡಿದೆ

- ಜಿ. ಪ್ರಕಾಶ್

09 Aug 2020, 03:29 am
Download App from Playstore: