ನರಜನ್ಮ

ದೇಹದ ರಾಜ್ಯಕೆ ಮನಸೆ ಅರಮನೆ 
ಆತ್ಮವೇ ರಾಜಕುಮಾರ 
ಸತ್ಯದ ತೇರಿಗೆ ನ್ಯಾಯವೇ ಕುದುರೆ 
ಜ್ಞಾನವೇ ಕೈಚಾಟಿ 
ಹೊರಡಲಿ ಜೀವನ ಯಾನ

ಪ್ರಕೃತಿ ದೇಗುಲ ದುಡಿಮೆಯೇ ದೇವರು 
ಶ್ರಮವೇ ಆರಾಧನೆ ವಿದ್ಯೆಯು ಶಿಖರ 
ಸಾಧನೆ ಗೋಪುರ ಛಲವೇ ನಿನ್ನಯ ಚಲನೆ

ನಗುವೇ ಮಲ್ಲಿಗೆ ಸ್ನೇಹವೇ ಸೌಗ೦ಧ 
ಆಸೆಗಳೇ ನೆರೆಹೊರೆಯವರು
ಹುಟ್ಟು ಹಗಲು ಸಾವು ಇರುಳು 
ನೆನಪುಗಳೇ ಘಳಿಗೆಗಳು

- ಜಿ. ಪ್ರಕಾಶ್

09 Aug 2020, 03:31 am
Download App from Playstore: