ಸತ್ತ ಪ್ರಜೆಗಳು 

ಕೊಂದರಪ್ಪ ಕೊಂದರು ಧರ್ಮವನ್ನೆ ಕೊಂದರು ಧರ್ಮವಂತರಾದ ಭಾರತೀಯರನ್ನೆ ಕೊಂದರು ಸುಟ್ಟರಪ್ಪ ಸುಟ್ಟರು ಸತ್ಯವನ್ನೇ ಸುಟ್ಟರು ಸತ್ಯವಂತರನ್ನ ಜೀವಂತ ಸುಟ್ಟು ಬಿಟ್ಟರು ಅಧಕಾರವೆಂಬ ಹೆಂಡ ಕುಡಿದು
ಸಿಕ್ಕ ಸಿಕ್ಕವರ ತುಳಿದು ತುಳಿದು
ಜನ್ಮ ಕೊಟ್ಟ ತಾಯಿಯನ್ನೆ ಮಾರಿಬಿಟ್ಟರು 


ಓದು ಬರಹ ಬರೋದಿಲ್ಲ ಕುರ್ಚಿ ಮೇಲೆ ಕೂರೊ ಆಸೆ ಮುಚ್ಚಿಕೊಂಡು ತಿರುಗಬೇಕು ನಾವು ಅವರ ಮೀಸೆ ನಾವು ಎಷ್ಟೇ ಒದ್ದಾಡಿದ್ರು ಸಿಕ್ಕೋದು ಪುಡಿ ಕಾಸೆ ಕಾಲು ಇಟ್ಟ ಕಡೆ ಎಲ್ಲ ಬರಿ ಚುಚ್ಚೋ ಮುಳ್ಳೆ ಸಿಕ್ಕುತೈತೆ ಕಣ್ಣು ಬಿಟ್ರೆ ಸುತ್ತ ಮುತ್ತ ಪಾಪಸ್ಕಳ್ಳಿ ಹೂವೆ ಕಾಣುತೈತೆ ಪಾಪ ಹೆಣ್ಣು ತಾನೆ ಹೆಂಗೆ ಮುಡಿಗೆ ಮುಡ್ಕೋತೈತೆ ಎದ್ದು ನಿಂತು ಪ್ರಶ್ನೆ ಮಾಡೋರ್ಯಾರು ಇಲ್ಲ 
ಕುತ್ಗೆ ಪಟ್ಟಿ ಹಿಡಿದು ಕೇಳೊ ಭೂಪ ಹುಟ್ಟೇ ಇಲ್ಲ
ನಾವು ನೀವು ತೆಪ್ಪಗಿರೋದು ಒಳ್ಳೇದಲ್ವ 
ಥೂ...... ನಮ್ ಜನ್ಮಕೆ 


ಒಳ್ಳೆ ವ್ಯಕ್ತಿ ನೋಡಲಿಲ್ಲ ಮತ ಹಾಕಿ ಬಿಟ್ಟೆವಲ್ಲ 
ದೇಶ ಪೂರ ದೋಚೋಕೆ ಸಿದ್ದರಾಗಿಬಿಟ್ಟರಲ್ಲ
ವಿಷವೃಕ್ಷದಂತೆ ಬ್ರಷ್ಟಚಾರ ಹುಟ್ಟಿ ಕೊಂಡಿತಲ್ಲ 
ಗಾಂಧಿ ಬುದ್ಧ ನೇತಾಜಿಯನ್ನು ನೆನೆಯಲಿಲ್ಲ ಲಂಚವೆಂಬ ಭೂತ ಸಿಕ್ಕ ಸಿಕ್ಕವರ ದೋಚಿಕೊಂಡು ತಾಯ ಬಿಟ್ಟು ಮಲತಾಯ ಆರೈಕೆ ಮಾಡಿಕೊಂಡು ಎಷ್ಟು ಹೊತ್ತು ಕೂರೋದು ಕಣ್ಣು ಮುಚ್ಚಿಕೊಂಡು ಆದ್ರೂ ನಾವು ಎದೆ ತಟ್ಟಿಕೊಂಡು ಹೇಳಬೇಕು 
ಭವ್ಯ ಭಾರತದ ಸತ್ತ ಪ್ರಜೆಗಳು 
ಎಲ್ರೂ ಹೇಳಿ ನಾವು ಸತ್ತ ಪ್ರಜೆಗಳು

- ಜಿ. ಪ್ರಕಾಶ್

09 Aug 2020, 03:36 am
Download App from Playstore: