ಭಾರತಾಂಬೆ
ನಮಿಸಿರಿ ಇದೋ ತಾಯಿ
ಭಾರತಾಂಬೆ ಯು ಇವಳು
ತ್ರಿವರ್ಣ ದ ಧ್ವಜವನ್ನವಳು
ಎತ್ತಿ ಹಿಡಿದು ತೊರುತ್ತಿಹಳು //ಪ//
ತಲೆಯಮೇಲೆ ಹಿಮದ ಗಿರಿ
ಅಡಿಗೆ ಮೂರು ಶಾಂತ ಜಲಧಿ
ನಾರುಮಡಿಯ ಉಟ್ಟು ನಿಂತು
ಕಿರು ನಗೆಯ ಬೀರುತಿಹಳು //ಚ// //೧//
ಬೇದ ಭಾವವನ್ನು ಅಳಿದು
ಭಾರತೀಯ ರಾಗಿರೇನುತಾ
ಶಾಂತಿಮಂತ್ರ ಕೈಯ್ಯಲ್ಹಿಡಿದು
ಭರದಿ ಮುಂದೆ ಸಾಗುತಿಹಳು //೨//
ಜಾತಿ _ಬೇದ ವನ್ನು ಮರೆತು
ಜಗಕೆ ದೀಪ ವಾಗಿರೇನುತ
ಜಯದ ಮಾಲೆ ಹಾಕಿಕೊಂಡು
ಜನಕೆ ಅಭಯ ನೀಡುತಿಹಳು //೩//
ಅಂಬೆ ನಿನ್ನ ಕರದ ಕರುಣೆ
ಎಮ್ಮ ಶಿರದ ಮೇಲೆ ಇರಲಿ
ಶಾಂತ ಮೂರ್ತಿ ಭಾರತಾಂಬೆ
ನಿನಗೆ ನಮಿಸುತಿಹೇವು ತಾಯಿ //೪//
ಕಲ್ಮೇಶ ಬಡಿಗೇರ
9743539657
............ಬಾದಾಮಿ........
- Kalmesh Badiger
09 Aug 2020, 01:02 pm
Download App from Playstore: