ಸ್ವಾತಂತ್ರ್ಯ

ಆಗಸದಿ ಹಾರಾಡುತಿಹ ನಮ್ಮ ರಾಷ್ಟ್ರಧ್ವಜಕ್ಕೂ ಹೃದಯಲಿ ಹರಿಯುತಿಹ ದೇಶಭಕುತಿ ಎಂಬ ರುಧಿರಕ್ಕೂ ಇರುವ ನಂಟು ಸ್ವಾತಂತ್ರ್ಯ.

ಹೆಮ್ಮೆಯಿಂದ ತಲೆಯೆತ್ತಿ ವಂದಿಸೋಣ ನಮ್ಮ ಉಸಿರು ಕಾಯಲು ತಮ್ಮ ಉಸಿರು ನೀಡುತ್ತಿರುವ ಪ್ರತಿಯೊಬ್ಬ ಯೋಧನಿಗೂ ನಮ್ಮ ಉಸಿರು ಇರುವವರೆಗೂ.

ವೈದ್ಯರಾಗಿಲಿ ಇಂದು ಗಡಿ ಕಾಯುವ ಸೈನಿಕನಾಗಲಿ, ಮನೆಯ ಮಾಲಿನ್ಯ ತೆಗೆದು
ಊರ ಕಾಯುವ ಉದ್ಯೋಗಿಗಳಾಗಲಿ, ಪ್ರಪಂಚಕೆ ಅನ್ನವಿಡುವ ರೈತನಾಗಲಿ.

ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ತಿಳಿಸೋಣ ಮೇಲೆಂಬ ಅಹಂಕಾರವಿಲ್ಲದೆ ಕೀಳೆಂಬ ತಿರಸ್ಕಾರ ತೋರದೆ, ಒಗ್ಗೂಡಿ ಬಾಳೋಣ ಒಂದಾಗಿ ನಡೆಯೋಣ.

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

- ಚುಕ್ಕಿ

15 Aug 2020, 02:04 pm
Download App from Playstore: