ಪಾರಿಜಾತ ಪುಷ್ಪ ನೀನು..

ಪಾರಿಜಾತ ಪುಷ್ಪ ನೀನು, ಈಗ  ಹೊರಟೆ ಎಲ್ಲಿಗೆ.
ಅಪಾರವಾದ ಪ್ರೀತಿ ಆಯ್ತು ಹೃದಯ ಒಡೆಯೋ ಮಟ್ಟಿಗೆ.
ನೀನು ಬರುವ ದಿಕ್ಕಿನಲ್ಲಿ ಕಾದು ಕುಳಿತಿತ್ತು ಗಾಳಿ ಕೂಡ ಅಲ್ಲೇ ಮೆಲ್ಲಗೆ.
ನಿನ್ನ ನಡಿಗೆ ನೋಡಿ ನೋಡಿ,ನವಿಲು ಕೂಡ ನಾಟ್ಯ ಕಲಿಯಿತು ತಕ್ಕಮಟ್ಟಿಗೆ...

ಬೆಳ್ಳಕ್ಕಿಗಳು ಸಾಲುಕಟ್ಟಿ ನಿನ್ನ ನೋಡಲು ಬರುತಿರಲು.
ಆ ಮೋಡದ ಮರೆಯಲ್ಲಿ ಚಂದ್ರ ಕೂಡ ನಿನಗಾಗಿ ಕಾದಿರಲು.
ಹೂವು ಕೂಡ ಕಾಯುತವೇ ನಿನ್ನ ನೋಟ ತಾಕಿ ಅರಳಲು.
ಚುಕ್ಕಿ ಕೂಡ ಕಾಯುತವೇ ನಿನ್ನ ನಗು ನೋಡಿ ಮಿನುಗಲು...

- NaveenkumarK

16 Aug 2020, 08:19 pm
Download App from Playstore: