ಮನಃಶಾಂತಿ
ಮನದಿ ಮೂಡಿದೆ ಕವನ ಬರೆಯುವಾಸೆ..
ಬರೆದಿಹೆನು ಮನದಲ್ಲಿರೊ ಭಾವನೆಯ..
ಹಗುರವಾಗಿರಿಸಿದೆ ನನ್ನೀ ಮನವನು..
ಇನ್ನಷ್ಟು ಬರೆಯುವಾಸೆ ಮೂಡುತಿಹುದು..
ಅದೇಕೋ ಬೇರೆಯವರ ಮಾತ ಕೇಳಿ ಮನವು ಹಿಂಜರಿಯುತಿಹುದು..
ಪಯಣ ಯಾವ ಕಡೆ ಎಂದು ತಿಳಿಯದಾಗಿದೆ..
ನನ್ನ ಮನ ಶಾಂತವಾಗಿರುವುದು ನನ್ನಿಷ್ಟದ ಕಡೆಗೆ ಹೋದರೆ..
ಇನ್ನೊಂದು ಕಡೆ ಕಡೆಗಣಿಸುವುದು ಅನಿವಾರ್ಯತೆಯಾಗಿದೆ..
ಮನವು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ..
ಮತ್ತೆ ಮನಃಶಾಂತಿಗಾಗಿ ಬರೆದಿಹೆನು ಈ ಕವನವನು..
@ಮೇಘ ಗಣೇಶ್
- Megha s
17 Aug 2020, 11:42 am
Download App from Playstore: